ನಾಗಪಟ್ಟಣ ಸದಾಶಿವ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರ

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ರಚನೆಯು ಜಿಲ್ಲಾ  ಧಾರ್ಮಿಕ ಪರಿಷತ್ ನ ನಿರ್ಣಯದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ರ ವಿಧಿ 25 ರನ್ವಯ ಆದೇಶದಂತೆ  ಮುಂದಿನ 3 ವರ್ಷಗಳ ಅವಧಿಗೆ ರಚನೆಗೊಂಡಿದ್ದು, ನೂತನ ಸಮಿತಿಗೆ ಜ.1 ರಂದು ಆಡಳಿತಾಧಿಕಾರಿ ಸೃಜನ್ ಎ. ಜಿ. ಯವರು ಅಧಿಕಾರ ಹಸ್ತಾಂತರ ಮಾಡಿದರು.
ವ್ಯವಸ್ಥಾಪನಾ ಸಮಿತಿ
ಅಧ್ಯಕ್ಷ ಬಾಬು ಗೌಡ ಬಿ. ಕಡೆಂಗರವರಿಗೆ ಕಡತಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ
ಸಮಿತಿಯ ಸದಸ್ಯರಾದ ಅರ್ಚಕ ರಾಜೇಂದ್ರ ಪ್ರಸಾದ್  ಮೂಡತ್ತಾಯ, ದಿನೇಶ್ ಕೋಲ್ಚಾರು, ರಾಧಾಕೃಷ್ಣ ಕೋಲ್ಚಾರು,ಪ್ರಸಾದ್ ಕುಮಾರ್
ನಾಗಪಟ್ಟಣ, ಶ್ರೀಮತಿ ಜಯಲಕ್ಷ್ಮಿ ನಾರ್ಕೋಡು, ಶ್ರೀಮತಿ ಮಾಲಾ ನಾಗಪಟ್ಟಣ, ಆನಂದ ಕುಮಾರ್ ನಾಗಪಟ್ಟಣ, ದಯಾನಂದ ಪಿ. ಎನ್ ಪಾತಿಕಲ್ಲು ಜತೆಯಲ್ಲಿದ್ದರು.

ಸ್ಥಳೀಯ ಪ್ರಮುಖರಾದ ಸತ್ಯಕುಮಾರ್ ಆಡಿಂಜ, ಭಜನಾ ಸಂಘದ ಅಧ್ಯಕ್ಷ ಹೂವಾನಂದ ಬಾರ್ಪಣೆ, ಧರ್ಮಪಾಲ ಕೊಯಿಂಗಾಜೆ, ಉಮೇಶ್ ಬೂಡುಪನ್ನೆ, ಸಿಬ್ಬಂದಿ ಶರತ್ ಗುಡ್ಡೆಮನೆ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading