Ad Widget

“ಸಮಾಜ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ” : ಲಯನ್ಸ್  ಜಿಲ್ಲಾ ಗವರ್ನರ್ ಲl  ಕುಡುಪಿ ಅರವಿಂದ ಶೆಣೈ ; ಬಳ್ಪದಲ್ಲಿ ನೂತನ ಆಟೋರಿಕ್ಷಾ ನಿಲ್ದಾಣ ಉದ್ಘಾಟನೆ

ಸುಬ್ರಹ್ಮಣ್ಯ ಡಿಸೆಂಬರ್ 30 : “ಸಮಾಜದಲ್ಲಿರುವ ಅಶಕ್ತರಿಗೆ, ಬಡಬಗ್ಗರಿಗೆ, ಸೂರಿಲ್ಲದವರಿಗೆ ಸೂರು, ಒಂದು ಹೊತ್ತಿನ ಊಟ ಇಲ್ಲದವರಿಗೆ ಅನ್ನ ನೀಡುವುದು, ಬಟ್ಟೆ ಇಲ್ಲದವರಿಗೆ ಬಟ್ಟೆ ನೀಡುವುದು, ಹಾಗೆಯೇ ಸಾರ್ವಜನಿಕರ ಉಪಯೋಗಕ್ಕಾಗಿ ಮಾಡುವಂತಹ ಬಸ್ಸು ತಂಗುದಾಣ, ರಿಕ್ಷಾ ತಂಗುದಾಣ, ಶೌಚಾಲಯ  ಅಥವಾ ಯಾವುದೇ ಜನೋಪಯೋಗಿ ಕೆಲಸಗಳು ಅದು ನಿಜವಾದ ಸಮಾಜ ಸೇವೆ ಹಾಗೂ ದೇವರ ಸೇವೆಯಾಗಿರುತ್ತದೆ” ಎಂದು ಲಯನ್ಸ್ ಜಿಲ್ಲೆ 315D ಇದರ ಜಿಲ್ಲಾ ಗವರ್ನರ್ ಉಡುಪಿ ಅರವಿಂದ ಶೇಣೈ
ನುಡಿದರು. ಅವರು ಶನಿವಾರ ಪಂಜ ಲಯನ್ಸ್ ಕ್ಲಬ್ ವತಿಯಿಂದ ಬಳ್ಪದಲ್ಲಿ ನೂತನವಾಗಿ ನಿರ್ಮಿಸಲಾದ ದಿ.ಚಿನ್ನಮ್ಮ ಹಾಗೂ ದಿ.ತೆಂಕಪಾಡಿ ಶೇಷಪ್ಪ ಗೌಡ ಇವರ ಸ್ಮರಣಾರ್ಥ ಅವರ ಸುಪುತ್ರ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ನಾಗೇಶ ತೆಂಕಪಾಡಿ ಕೊಡುಗೆಯಾಗಿ ನೀಡಿದ ಆಟೋರಿಕ್ಷಾ ನಿಲ್ದಾಣವನ್ನ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಧುರೀಣ ಪಂಜ ಲಯನ್ಸ್ ನ ಸ್ಥಾಪಕರಾದ ಜಾಕೆ ಮಾಧವ ಗೌಡ, ಪ್ರಾಂತೀಯ ಅಧ್ಯಕ್ಷ ಲಯನ್l ಪ್ರೊಫೆಸರ್ ರಂಗಯ್ಯ ಶೆಟ್ಟಿಗಾರ್, ವಲಯ ಅಧ್ಯಕ್ಷ ದಿಲೀಪ್  ಬಾಬ್ಲುಬೆಟ್ಟು, ಕಾರ್ಯದರ್ಶಿ ಕರುಣಾಕರ ಎಣ್ಣೆಮಜಲು, ಕೋಶಾಧಿಕಾರಿ ವಾಸುದೇವ ಮೇಲ್ಪಾಡಿ, ನಿಕಟ ಪೂರ್ವ ಅಧ್ಯಕ್ಷ ಶಶಿಧರ ಪಳಂಗಾಯ, ಪೂರ್ವ ಅಧ್ಯಕ್ಷರುಗಳಾದ ತುಕಾರಾಮ ಏನೇಕಲ್ಲು, ಕುಮಾರಸ್ವಾಮಿ ಕಿನಿಕುಮೇರಿ, ನೇಮಿರಾಜ ಪಲ್ಲೋಡಿ, ಸೀತಾರಾಮ ಎಣ್ಣೆಮಜಲು, ಸುಬ್ರಹ್ಮಣ್ಯ ಲಯನ್ಸ್  ಕ್ಲಬ್ ಅಧ್ಯಕ್ಷೆ ವಿಮಲಾ ರಂಗಯ್ಯ, ಸಂತೋಷ್ ಜಾಕೆ, ನೇಮಿರಾಜ ಪಲ್ಲೋಡಿ, ಕುಸುಮಾದರ ಪಂಜ, ಅನುರಾಜ್ ಪಂಜ, ಆನಂದ, ಗಗನ್ ತೆಂಕಪಾಡಿ, ಪಂಜ ಲಯನ್ಸ್ ಕ್ಲಬ್ ನ ಸದಸ್ಯರುಗಳು, ಬಳ್ಪ ಆಟೋ ಮಾಲಕರು ಹಾಗೂ ಚಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading