Ad Widget

ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸಹಾಯಾನುದಾನದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ ; “ಡಾ. ಕುರುಂಜಿಯವರ ನೆನಪು ಬಡವರ ಸೇವೆಯ ಮೂಲಕ ಅರ್ಥಪೂರ್ಣ” : ಜಯಪ್ರಕಾಶ್ ರೈ

ಡಾ. ಕುರುಂಜಿ ವೆಂಕಟ್ರಮಣ ಗೌಡರ 97ನೇ ಜಯಂತ್ಯೋತ್ಸವದ  ಅಂಗವಾಗಿ ಸಮಾಜ ಸೇವಾ ಕಾರ್ಯ ವಿಭಾಗದಲ್ಲಿ ಜಟ್ಟಿಪ್ಪಳ್ಳ ನಿವಾಸಿ ಕಮಲ ರವರಿಗೆ ಮನೆ ನಿರ್ಮಾಣ ಪೂರ್ತಿಗೊಳಿಸಲು ರೂ 1 ಲಕ್ಷ ಸಹಾಯಾನುದಾನ  ನೀಡಲಾಗಿದ್ದು, ಪೂರ್ಣ ಗೊಂಡ ಮನೆಯನ್ನು ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾದ ಎನ್.ಜಯಪ್ರಕಾಶ್ ರೈ ನಾಮಫಲಕ ಅನಾವರಣಗೊಳಿಸಿ ಲೋಕಾರ್ಪಣೆ ಗೊಳಿಸಿದರು. ಹಿರಿಯರಾದ ಪಾಚುರವರು ದೀಪ ಬೆಳಗಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಟಿ. ವಿಶ್ವನಾಥ್, ಪ್ರದಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಖಜಾಂಚಿ ಚಂದ್ರಾವತಿ ಬಡ್ಡಡ್ಕ, ಮನೆಯ ನಿರ್ಮಾಣ ಉಸ್ತುವಾರಿ ವಹಿಸಿಕೊಂಡ ಪೆಲ್ತಡ್ಕ ರಾಮಚಂದ್ರ, ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ, ಉದ್ಯಮಿ ಹೇಮಂತ್ ಕಾಮತ್, ಸಂಘದ ಪದಾಧಿಕಾರಿಗಳಾದ ದಿನೇಶ್ ಅಂಬೆಕಲ್ಲು, ದಿನೇಶ್ ಮಡಪ್ಪಾಡಿ, ವಿನುತಾ ಪಾತಿಕಲ್ಲು, ರಾಜು ಪಂಡಿತ್, ಶರೀಫ್ ಜಟ್ಟಿಪ್ಪಳ್ಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading