Ad Widget

ಬೆಳ್ಳಾರೆ ಕೆ.ಪಿ.ಎಸ್ ನಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ – “ಚಿತ್ರಕಲೆ ಮಕ್ಕಳ ಮನಸ್ಸನ್ನು ಅರಳಿಸುತ್ತದೆ” :  ಶಮಿತಾ.ಪಿ ರೈ ಪನ್ನೆ

ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ಮತ್ತು ಸ್ನೇಹಿತರ ಕಲಾ ಸಂಘ ಆಶ್ರಯದಲ್ಲಿ “75 ದಿನಗಳ ಸ್ವಚ್ಛತಾ ಅಭಿಯಾನ ಪಂಚ ಸಪ್ತತಿ 2025” ಅಂಗವಾಗಿ  “ನಮ್ಮ ಗ್ರಾಮ ಸ್ವಚ್ಛ ಗ್ರಾಮ, ಸ್ವಚ್ಛತೆಯೆಡೆಗೆ ನಮ್ಮ ನಡಿಗೆ” ಯೋಜನೆಯಂತೆ, “ಶಾಲೆಯತ್ತ ನಮ್ಮ ಚಿತ್ತ” ಬೆಳ್ಳಾರೆ ಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಛ ಪರಿಸರಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಚಿತ್ರವನ್ನು ಬಿಡಿಸಿ ಎಂಬ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮವು  ಡಿ23ರಂದು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್  ಪ್ರಾಥಮಿಕ ವಿಭಾಗ ದಲ್ಲಿ  ನಡೆಯಿತು. 
ಬೆಳ್ಳಾರೆ ಚಿತ್ಕಲಾ ಚಿತ್ರಕಲಾ ಶಾಲೆ ಶಿಕ್ಷಕಿ ಶಮಿತಾ.ಪಿ ರೈ ಪನ್ನೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಹರ್ಷ ಜೋಗಿಬೆಟ್ಟು ಮುಖ್ಯ ಅತಿಥಿಗಳಾಗಿ ಶುಭಹಾರೈಸಿದರು.
ಕೆ.ಪಿ.ಎಸ್ ಬೆಳ್ಳಾರೆ ಹಿರಿಯ ಶಿಕ್ಷಕಿ ಪಾರ್ವತಿ, ಸಹ ಶಿಕ್ಷಕ ದಿನೇಶ್ ಮಾಚಾರ್, ಸ್ನೇಹಿತರ ಕಲಾ ಸಂಘದ ಕ್ರೀಡಾ ಮತ್ತು ಸಾಂಸ್ಕೃತಿಕ  ಕಾರ್ಯದರ್ಶಿ ಮಹಾಲಿಂಗ ಪಾಟಾಳಿ ಕುರುoಬುಡೇಲು ಪೂರ್ವಾಧ್ಯಕ್ಷರಾದ ಕೊರಗಪ್ಪ ನಾಯ್ಕ ಕುರುಬುಂಡೇಲು, ಸಂಜಯ್ ನೆಟ್ಟಾರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading