Ad Widget

ಡಿ.28ರಂದು ಐವರ್ನಾಡು ಗ್ರಾಮ ಕ್ರಿಕೆಟ್ ಹಬ್ಬ

ಮಾಡತ್ತಕಾನ ಸ್ಪೋರ್ಟ್ಸ್ ಕ್ಲಬ್(ರಿ.) ಐವರ್ನಾಡು ಇದರ ಆಶ್ರಯದಲ್ಲಿ ಡಿ.28ರಂದು ಐವರ್ನಾಡು ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ “ಐವರ್ನಾಡು ಗ್ರಾಮ ಕ್ರಿಕೆಟ್ ಹಬ್ಬ – IPL Season 10” ನಡೆಯಲಿದ್ದು, ಬೆಳ್ಳಾರೆ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಈರಯ್ಯ.ಡಿ.ಎನ್ ರವರು ಉದ್ಘಾಟಿಸಲಿದ್ದು, ಸುಳ್ಯ ಕೆ.ವಿ.ಜಿ ಐ.ಟಿ.ಐ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಎನ್ ಮನ್ಮಥ, ಶ್ರೀಮತಿ ಜ್ಯೋತ್ಸ್ನಾ ಪಾಲೆಪ್ಪಾಡಿ, ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ ಕುತ್ಯಾಡಿ, ಉಪಾಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ, ಸದಸ್ಯರಾದ ಸತೀಶ್ ಜಬಳೆ ಹಾಗೂ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಜೇಶ್ ಭಟ್ ಬಾಂಜಿಕೋಡಿ ಸೇರಿದಂತೆ ಮುಂತಾದವರು ಉಪಸ್ಥಿತರಿರಲಿದ್ದಾರೆ.
ನಂತರ ಕ್ರಿಕೆಟ್ ಪಂದ್ಯಾಟ ನಡೆದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಥಮ ಬಹುಮಾನ 12,000/- ಹಾಗೂ ಟ್ರೋಫಿ, ದ್ವಿತೀಯ 8,000/- ಹಾಗೂ ಟ್ರೋಫಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading