Ad Widget

ಕಲಾ ರತ್ನ ರವಿ ಪಾಂಬಾರ್ ಇವರಿಗೆ ಕನ್ನಡ ರಾಜ್ಯೋತ್ಸವ ರಾಜ್ಯಮಟ್ಟದ ಪ್ರಶಸ್ತಿ

ಆರ್.ಪಿ ಕಲಾ ಸೇವಾ ಟ್ರಸ್ಟ್(ರಿ.) ಇದರ ಸಂಚಾಲಕರು ಹಾಗೂ ಸಂಘಟಕರು,ಖ್ಯಾತ ಗಾಯಕರು, ಯುವ ಸಾಹಿತಿ, ಕವಿ ಹಾಗೂ ಜಾನಪದ ನೃತ್ಯಗಾರರಾದ ಕಲಾರತ್ನ ರವಿ ಪಾಂಬಾರು ಅವರು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮದೇ ಆದಂತಹ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಾಧನೆ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭೆ. ಇವರ ಕಲೆ ಹಾಗೂ ಸಂಸ್ಕೃತಿಯನ್ನು ಗುರುತಿಸಿ ಕನ್ನಡ ಫಿಲಂ ಚೇಂಬರ್(ರಿ.) ಇದರ ವತಿಯಿಂದ  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.24 ರಂದು ಕನ್ನಡ ರಾಜ್ಯೋತ್ಸವ 2024ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಫಿಲಂ ಚೇಂಬರ್ ನ ಎಂ.ಎಸ್ ರವೀಂದ್ರರವರು ಹಾಗೂ ಸಾಹಿತಿ, ನಟ, ಜ್ಯೋತಿಷಿ, ಚಲನಚಿತ್ರ ನಿರ್ದೇಶಕ ಭೀಮರಾವ್ ವಾಷ್ಟರ್, ಆರ್.ಪಿ ಕಲಾ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷರಾದ ಶ್ರೀಧರ್ ಎಕ್ಕಡ್ಕ, ವಿಠ್ಠಲ್ ನಾಯ್ಕ್ ಬಳ್ಳಿಕ್ಕನ, ಚಲನಚಿತ್ರ ನಾಯಕ ನಟರು, ನಿರ್ದೇಶಕರು, ಸಾಮಾಜಿಕ ಗಣ್ಯರು ಧಾರ್ಮಿಕ ಕ್ಷೇತ್ರದ ಮುಖಂಡರು ಗಣ್ಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading