Ad Widget

ಡಾ. ಕುರುಂಜಿ ವೆಂಕಟ್ರಮಣ ಗೌಡರ 97ನೇ ಜಯಂತ್ಯೋತ್ಸವ ಕೆವಿಜಿ ಸುಳ್ಯಹಬ್ಬ -2025 ಉದ್ಘಾಟನೆ

ಚಿತ್ರ : ನವೀನ್ ಗೋಪಾಲ್ ಸ್ಟುಡಿಯೋ ಸುಳ್ಯ

. . . . . . . . .

ಡಾ. ಕೆವಿ. ಚಿದಾನಂದ ಅವರಿಂದ ಕ್ರೀಡಾಕೂಟಕ್ಕೆ ಚಾಲನೆ

. . . . . . .

ಆಧುನಿಕ ಸುಳ್ಯದ ಭವ್ಯಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ 97ನೇ ಜಯಂತ್ಯೋತ್ಸವ ಕೆವಿಜಿ ಸುಳ್ಯಹಬ್ಬ 2025 ಕಾರ್ಯಕ್ರಮವನ್ನು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ಅವರು ದೀಪ ಬೆಳಗಿಸಿ, ಉದ್ಘಾಟಿಸಿದರು.

ಕೆವಿಜಿ ಸುಳ್ಯಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ವಿಶ್ವನಾಥ ಅವರು ಅಧ್ಯಕ್ಷತೆ ವಹಿಸಿದ್ದರು. ಕೆವಿಜಿ ಸುಳ್ಯಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಕೋಶಾಧಿಕಾರಿ ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಸಂಘದ ನಿಕಟಪೂರ್ವಾಧ್ಯಕ್ಷ ಎನ್.ಎ. ಜ್ಞಾನೇಶ್, ಕ್ರೀಡಾ ಸಂಚಾಲಕ ದೊಡ್ಡಣ್ಣ ಬರಮೇಲು, ಸಾಂಸ್ಕೃತಿಕ ಸಂಚಾಲಕಿ ಶ್ರೀಮತಿ ಧನಲಕ್ಷ್ಮಿ ಕುದ್ಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟಕ್ಕೆ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ಅವರು ಹಾಗೂ ಕ್ರೀಡಾಕೂಟಕ್ಕೆ ಕೆವಿಜಿ ಸುಳ್ಯಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ಚಾಲನೆ ನೀಡಿದರು.
ಶ್ರೀಮತಿ ಮಮತ ರವೀಶ್ ಪಡ್ಡಂಬೈಲು ಹಾಗೂ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading