Ad Widget

ಹರಿಹರ ಪಳ್ಳತ್ತಡ್ಕ : ದಿ. ದಿವಾಕರ ಮುಂಡಾಜೆ ರವರ ಸ್ಮರಣಾರ್ಥ ನಡೆಯಲಿರುವ ಕ್ರಿಕೆಟ್ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

ದಿ. ದಿವಾಕರ ಮುಂಡಾಜೆ ರವರ ಸ್ಮರಣಾರ್ಥ 2026ರ ಜ.31 ಹಾಗೂ ಫೆ.01ರಂದು ಬಾಳುಗೋಡಿನ ಬೆಟ್ಟುಮಕ್ಕಿ ಕ್ರೀಡಾಂಗಣದಲ್ಲಿ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ 11 ಜನರ 12 ತಂಡಗಳ ಸೂರ್ಯ ಬೆಳಕಿನ ಲೀಗ್ ಮಾದರಿಯ “ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಕೂಟ”ದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಡಿ.24ರಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯಿತು. ಮೊದಲಿಗೆ ಶ್ರೀ ದೇವರಿಗೆ ಪ್ರಾರ್ಥನೆ ನೆರವೇರಿಸಿ ನಂತರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾಟದ ಗೌರವಾಧ್ಯಕ್ಷರಾದ ಹರ್ಷ ಮುಂಡಾಜೆ, ಅಧ್ಯಕ್ಷರಾದ ಉಜ್ವಲ್ ಕಜ್ಜೋಡಿ, ಉಪಾಧ್ಯಕ್ಷರಾದ ಸಂತೋಷ್ ಪಳಂಗಾಯ, ಖಜಾಂಜಿ ಪೃಥ್ವಿಚಂದ್ರ ಮುಂಡಾಜೆ, ದೇವಳದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್, ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯರಾದ ಲೋಲಾಕ್ಷ ಕೈಕಂಬ, ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಬೆಳ್ಯಪ್ಪ ಖಂಡಿಗೆ, ಐನೆಕಿದು-ಸುಬ್ರಹ್ಮಣ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಸೋಮಶೇಖರ್ ಕಟ್ಟೆಮನೆ, ಕಿಶೋರ್ ಮುಂಡಾಜೆ, ಪ್ರಿಯಾ ಕಲ್ಲೇಮಠ, ಮಾ.ರಿಹಾನ್, ದಯಾನಂದ ಪರಮಲೆ, ಆಶಿಕ್ ಕೂಜುಗೋಡು, ಯೋಗೀಶ್ ಮೆತ್ತಡ್ಕ, ಹರ್ಷಿತ್ ತಳೂರು, ಮಧು ಗೋಳ್ಯಾಡಿ, ನಿಶ್ಮಿತ್ ತಳೂರು ಹಾಗೂ ಕಾರ್ತಿಕ್ ವಾಡ್ಯಪ್ಪನಮನೆ ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading