Ad Widget

ಪಳ್ಳಿಮಜಲು-ಪಾಟಾಜೆ ರಸ್ತೆಗೆ ಮಣ್ಣು ಹಾಕಿ ತಾತ್ಕಾಲಿಕ ದುರಸ್ತಿ ಕಾರ್ಯ

ಕಳೆದ 12 ವರುಷಗಳಿಂದಲೂ ಮರು ಡಾಮರೀಕರಣಗೊಳ್ಳದೆ ಸಂಚಾರಕ್ಕೆ ದುಸ್ತರವಾಗಿದ್ದ ಬೆಳ್ಳಾರೆ ಗ್ರಾಮದ  ಪಳ್ಳಿಮಜಲು ಪಾಟಾಜೆ ರಸ್ತೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ತಾತ್ಕಾಲಿಕವಾಗಿ ಮಣ್ಣು ಹಾಕಿ ಸರಿಪಡಿಸುವ ಕಾರ್ಯ ನಡೆದಿದೆ. ಹಲವಾರು ಮನೆಗಳು ಈ ರಸ್ತೆಯ ಮೂಲಕ ಸಿಗುತ್ತಿದ್ದು, ಮಸೀದಿ, ದೈವಸ್ಥಾನ, ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿ,vಪಾಟಾಜೆ ಶಾಲೆಗೆ ಈ ರಸ್ತೆಯ ಮೂಲಕವೇ ಹೋಗಬೇಕಾಗಿರುವುದು. ತಾತ್ಕಾಲಿಕ ಮಣ್ಣು ಹಾಕಿ ಸರಿಪಡಿಸಲಾಗಿದ್ದು ಶೀಘ್ರದಲ್ಲೇ ಈ ರಸ್ತೆಯು ಕಾಂಕ್ರೀಟೀಕರಗೊಳ್ಳಲಿದೆ ಎಂದು ತಿಳಿದು
ಬಂದಿದೆ.vಬೆಳ್ಳಾರೆ ಗ್ರಾಮ ಪಂಚಾಯತ್ ಒಂದನೇ ವಾರ್ಡ್ ಸದಸ್ಯ ಅನಿಲ್ ರೈ ಚಾವಡಿಬಾಗಿಲು ಹಾಗೂ ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ಸಂಘಟನಾ ಕಾರ್ಯದರ್ಶಿ ಹಮೀದ್ ಹೆಚ್.ಎಂ‌ ಬೆಳ್ಳಾರೆ ಇವರ ಮುಂದಾಳತ್ವದಲ್ಲಿ ಈ ಮಣ್ಣು ಹಾಕುವ ಕಾರ್ಯ ನಡೆದಿದೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading