Ad Widget

ಗುತ್ತಿಗಾರು : ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬೃಹತ್ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ ಹಾಗೂ ಬೀದಿ ನಾಟಕ ಪ್ರದರ್ಶನ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ತಾಲೂಕು ಇದರ ವತಿಯಿಂದ ತಾಲೂಕಿನ ಯುವಕ ಯುವತಿ ಮಂಡಲಗಳಿಗೆ ನಡೆದ “ಪಂಚಸಪ್ತತಿ – 2025 ; 75 ದಿನಗಳ ಸ್ವಚ್ಚತಾ ಅಭಿಯಾನ”ದ ಅಂಗವಾಗಿ ಗುತ್ತಿಗಾರಿನ ಪ್ರತಿಷ್ಠಿತ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ.) ವತಿಯಿಂದ ನಿರಂತರವಾಗಿ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ 75ನೇ ದಿನ‌ ಗುತ್ತಿಗಾರಿನ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಜಾಗೃತಿ ಘೋಷವಾಕ್ಯ ಗಳ ಫಲಕಗಳನ್ನು ಅಳವಡಿಸಲಾಯಿತು.
ಅಲ್ಲದೇ ಗುತ್ತಿಗಾರು ಗ್ರಾಮ ಪಂಚಾಯತ್ ಮತ್ತು ಕ್ಲಬ್ ನ ಜಂಟಿ ಆಶ್ರಯದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ “ಬೃಹತ್ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ” ಮಾಡುವುದರೊಂದಿಗೆ ಸ್ವಚ್ಚತೆ ಕಾಪಾಡಲು ಅನೇಕ ನಿರ್ಣಯಗಳನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ವೀರಮಾರುತಿ ಕ್ಲಬ್ ನ ಅಧ್ಯಕ್ಷರಿಗೆ ಮತ್ತು ಎಲ್ಲಾ ನಿರ್ದೇಶಕರರುಗಳಿಗೆ ಸನ್ಮಾನ ಮಾಡುವ ಮೂಲಕ ಗೌರವಿಸಿದರು.
ಪಂಚಸಪ್ತತಿ ಕಾರ್ಯಕ್ರಮದ‌ ಅಂಗವಾಗಿ ವೀರಮಾರುತಿ ಕ್ಲಬ್ ಸದಸ್ಯರಿಂದ ಪಂಚಾಯತ್ ಬಳಿ, ಗುತ್ತಿಗಾರು ಬಸ್ಸು ನಿಲ್ದಾಣದ ಬಳಿ ಮತ್ತು ಮುತ್ತಪ್ಪ ನಗರದಲ್ಲಿ ಸ್ವಚ್ಚತಾ ಜಾಗೃತಿ ಮೂಡಿಸುವ “ಬೀದಿ ನಾಟಕ” ಮಾಡಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading