Ad Widget

ಡಿ.27 – 29: ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಮೃತ ಮಹೋತ್ಸವ ಆಚರಣೆ ; 1.05 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ; ಸಚಿವರು – ಸಂಸದರು -ಶಾಸಕರ ಸಹಿತ ಗಣ್ಯರ ಆಗಮನ ; ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಅವರಿಂದ ಪತ್ರಿಕಾಗೋಷ್ಠಿ

ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿರುವ ಸುಳ್ಯದ  ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಮೃತ ಮಹೋತ್ಸವ ಆಚರಣೆಯು  ಡಿ.27 ರಿಂದ ಡಿ.29ರ ವರೆಗೆ ಅದ್ದೂರಿಯಾಗಿ ನಡೆಯಲಿದ್ದು, ಸಚಿವರು, ಸಂಸದರು, ಶಾಸಕರ ಸಹಿತ ಗಣ್ಯಾತಿತ ಗಣ್ಯ ಅತಿಥಿಗಳು ಭಾಗವಹಿಸಲಿದ್ದು, ಕಾರ್ಯಕ್ರಮದ ಪೂರ್ವ ಸಿದ್ಧತಾ ಕೆಲಸ ಕಾರ್ಯಗಳು ಭರದಿಂದ ಸಾಗಿದೆ ಎಂದು ಕಾಲೇಜಿನ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ಸೀತಾರಾಮ ರೈ ಸವಣೂರು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜು ಅಮೃತ ಮಹೋತ್ಸವ ಸಮಿತಿ ಕಛೇರಿಯಲ್ಲಿ ಡಿ.22ರಂದು  ಪತ್ರಿಕಾಗೋಷ್ಠಿ ನಡೆಸಿದ ಅವರು ಅಮೃತ ಮಹೋತ್ಸವ ಕಾರ್ಯಕ್ರಮದ ಕುರಿತಂತೆ ಸವಿವರವಾದ ಮಾಹಿತಿಯನ್ನು ನೀಡಿದರು.

ಅಮೃತ ಮಹೋತ್ಸವದ ಪ್ರಯುಕ್ತ ವಿವಿಧ ಅಭಿವೃದ್ಧಿ ಯೋಜನೆಗಳ ನಿರ್ಮಾಣ, ವೈವಿಧ್ಯಮಯ ವಸ್ತುಪ್ರದರ್ಶನ, ಶೈಕ್ಷಣಿಕ ವಸ್ತು ಪ್ರದರ್ಶನ, ಸಭಾ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 3 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಡಿ.27ರಂದು ಪೂರ್ವಾಹ್ನ 10:00ಕ್ಕೆ ವಸ್ತು ಪ್ರದರ್ಶನವನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ ರೇಣುಕಾಪ್ರಸಾದ್ ಅವರು  ಉದ್ಘಾಟಿಸಲಿದ್ದಾರೆ. ಬಳಿಕ ಸುಮಾರು ಹದಿಮೂರು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಭೋಜನಾಲವನ್ನು  ದಾನಿಗಳಾದ ಕೃಷ್ಣ ನಾವಡ ಅವರು ಉದ್ಘಾಟಿಸಲಿದ್ದಾರೆ‌.

ಬೆಳಿಗ್ಗೆ ರಾಜ್ಯ ವಿಧಾನಸಭಾ  ಅಧ್ಯಕ್ಷ ಯು.ಟಿ ಖಾದ‌ರ್ ಅವರ ಉಪಸ್ಥಿತಿಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಿಡುಗಡೆ ಮಾಡಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸೀತಾರಾಮ ರೈಗಳು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಶಾಸಕರಾದ ಎಸ್.ಎಲ್ ಭೋಜೇಗೌಡ, ವಿಶೇಷ ಆಹ್ವಾನಿತರಾಗಿ ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ದ.ಕ ಜಿಲ್ಲಾಧ್ಯಕ್ಷ ಭರತ್‌ ಮುಂಡೋಡಿ, ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್‌ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ಕೆ.ಎಸ್.ಇ.ಎ.ಬಿ ಕಾರ್ಯದರ್ಶಿ ಮಲ್ಲೇಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ರಾಜೇಶ್ವರಿ ಹೆಚ್.ಹೆಚ್, ಸುಳ್ಯ ತಾಹಶೀಲ್ದಾ‌ರ್ ಮಂಜುಳ.ಎಂ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್.ಯು.ಕೆ, ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್ ಉಪಸ್ಥಿತರಿರಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

.ಅಪರಾಹ್ನ ಸಾಂಸ್ಕೃತಿಕ ವೈವಿಧ್ಯ ಹಾಗೂ ಸಂಜೆ  ಕಲಾಮಯಂ ಉಡುಪಿ ತಂಡದಿಂದ ಜಾನಪದ ನಾಟ್ಯ ವೈಭವ ನಡೆಯಲಿದೆ.

ಡಿ.28ರಂದು ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್ ಅಂಗಾರ ಅವರು ಅಧ್ಯಕ್ಷತೆ ಮಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಶಾಲೆ ಮತ್ತು ಕಾಲೇಜಿನಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ 125 ಜನರನ್ನು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಗೌರವಿಸಲಿದ್ದಾರೆ.
ಈ ಸಂದರ್ಭದಲ್ಲಿ  ಪದ್ಮಶ್ರೀ  ಗಿರೀಶ್ ಭಾರಧ್ವಜ್, ಚಿದಾನಂದ ಗೌಡ ಕೊಳಂಬೆ, ಸುಂದರ ನಾಯ್ಕ ಅವರು  ಉಪಸ್ಥಿತಿತರಿರಲಿದ್ದಾರೆ. ಅಪರಾಹ್ನ  ಸಾಂಸ್ಕೃತಿಕ ವೈವಿಧ್ಯ ಹಾಗೂ ಸಂಜೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸವಣೂರು ಸೀತಾರಾಮ ರೈಗಳು ತಿಳಿಸಿದರು.

ಡಿ.29ರಂದು ಬೆಳಿಗ್ಗೆ ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ದಾನ ರೂಪದಲ್ಲಿ ನೀಡುವ ರೂ.1ಕೋಟಿ ವೆಚ್ಚದ ತರಗತಿ ಕೋಣೆ ಸಮುಚ್ಚಯದ ಶಂಕುಸ್ಥಾಪನೆ ನಡೆಯಲಿದೆ. ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಕೆ.ವಿ. ಚಿದಾನಂದ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ವಾಗ್ನಿ ಎನ್.ಆರ್.ದಾಮೋದರ ಶರ್ಮ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆ‌ರ್.ಕೆ. ನಾಯರ್, ಒಸಾಟ್ ಸಂಸ್ಥೆಯ ಸ್ಥಾಪಕ ವಾದಿರಾಜ ಭಟ್, ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಸಿಪ್ರಿಯನ್ ಮಂತೆರೋ, ಉಪನಿರ್ದೇಶಕರಾದ ಜಿ.ಎಸ್ ಶಶಿಧರ, ಡಯಟ್ ಪದನಿಮಿತ್ತ ನಿರ್ದೇಶಕ ಸದಾನಂದ ಪೂಂಜ ಉಪಸ್ಥಿತರಿರುವರು. ಮಧ್ಯಾಹ್ನ ಪ್ರೌಢ ಶಾಲಾ ಹಾಗೂ ಕಾಲೇಜು ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ಸಂಜೆ ಅರೆಭಾಷೆ ನಾಟಕ ಅಪ್ಪ ಪ್ರದರ್ಶನಗೊಳ್ಳಲಿದೆ ಎಂದು ಸೀತಾರಾಮ ರೈಗಳು  ವಿವರಿಸಿದರು.

ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಕಾಲೇಜು ಆವರಣದಲ್ಲಿ ಸುಮಾರು 1.05 ಕೋಟಿ ರೂಗಳ ಕಾಮಗಾರಿ ನಡೆಸಲಾಗಿದೆ. ಕಾಲೇಜಿನ ತರಗತಿ ಕೋಣೆ, ಪ್ರೌಢ ಶಾಲೆ ಪಾಕಶಾಲೆ, ಕಾಲೇಜು ವಿಭಾಗದ ಅಡುಗೆ ಕೋಣೆ, ಪ್ರೌಢ ಮತ್ತು ಕಾಲೇಜು ದಾಸ್ತಾನು ಕೊಠಡಿ, ಭೋಜನಾಲಯ, ಮೈದಾನದ ತಡೆಗೋಡೆ, ಪ್ರೇಕ್ಷಕರ ಸ್ಟಾಂಡ್, ಪ್ರೇಕ್ಷಕರ ಗ್ಯಾಲರಿ, ಒಳಾಂಗಣ ಇಂಟರ್ ಲಾಕ್, ಸುಣ್ಣ ಬಣ್ಣ ಸೇರಿದಂತೆ ನಾನಾ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಅವರು ಮಾಹಿತಿ ‌ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಬಿ ಸದಾಶಿವ, ಕೋಶಾಧಿಕಾರಿ ಅಶೋಕ ಪ್ರಭು, ಸಂಘಟನಾ ಕಾರ್ಯದರ್ಶಿ ಮುಸ್ತಫಾ ಕೆ.ಎಂ, ಹಿರಿಯ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ ಕಾರ್ಯಾಧ್ಯಕ್ಷ ಲಿಂಗಪ್ಪ ಗೌಡ ಕೇರ್ಪಳ, ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಅಧ್ಯಕ್ಷೆ ಮಂಜುಳಾ ಬಡಿಗೇರ್, ಪ್ರಾಂಶುಪಾಲ ಮೋಹನ್‌ ಗೌಡ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಪಿ, ಜೊತೆ ಕೋಶಾಧಿಕಾರಿ ರಾಮಚಂದ್ರ ಪಲ್ಲತ್ತಡ್ಕ ಡಾ.ರಂಗಯ್ಯ, ಎನ್‌.ಜಯಪ್ರಕಾಶ್ ರೈ ಕೆ.ಗೋಕುಲ್‌ದಾಸ್‌, ಚಂದ್ರಶೇಖರ ಪೇರಾಲು, ಡಾ.ಎನ್.ಎ.ಜ್ಞಾನೇಶ್, ಬೆಳ್ಯಪ್ಪ ಗೌಡ ಸೇರಿದಂತೆ ಅಮೃತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading