Ad Widget

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ.) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಇದರ ಸುಳ್ಯ ವಲಯದ ವತಿಯಿಂದ ಸಾಮಾನ್ಯ ಸಭೆ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ.) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಇದರ ಸುಳ್ಯ ವಲಯದ ವತಿಯಿಂದ ಡಿ.19 ರಂದು ಕುಕ್ಕೆ ಸುಬ್ರಹ್ಮಣ್ಯದ ಪಂಚಾಯತ್ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯಿತು.

ಈ ಸಂಧರ್ಭದಲ್ಲಿ ಸುಳ್ಯವಲಯದ ಅಧ್ಯಕ್ಷರಾದ ಶಶಿ ಗೌಡ “ಸುಳ್ಯ ಫೋಟೋಗ್ರಾಫಿ ಎಂಬುದು ಕೇವಲ ಉದ್ಯಮ ಮಾತ್ರವಲ್ಲ ಪ್ರತಿಯೊಂದು ಕ್ಷಣಗಳನ್ನು ಸೆರೆ ಹಿಡಿಯುವುದಲ್ಲದೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಬಹಳ ಹೆಮ್ಮೆಯ ವಿಷಯ” ವೆಂಬುದನ್ನು ಸಭೆಯಲ್ಲಿ ತಿಳಿಸಿದರು, ಹಾಗೂ “ಯಾವುದೇ ಸಂಘವನ್ನು ಎಲ್ಲ ಸದಸ್ಯರು ಒಗ್ಗಟಿನಲ್ಲಿ ಕೆಲಸ ಮಾಡುವುದರಿಂದ ಮುನ್ನಲೆಗೆ ತರುವಲ್ಲಿ ಯಶಸನ್ನು ಕಾಣಬಹುದು” ಎಂದರು.

ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಸಂಚಾಲಕರಾದ ಗೋಪಾಲ್ ಸುಳ್ಯ, ಅಧ್ಯಕ್ಷ ಶಶಿ ಗೌಡ ಸುಳ್ಯ, ಉಪಾಧ್ಯಕ್ಷ ಪ್ರಶಾಂತ್ ಶೇಣಿ,
ಕಾರ್ಯದರ್ಶಿ ಸತೀಶ್, ಗೋಪಾಲ್ ಸುಳ್ಯ, ಕೋಶಾಧಿಕಾರಿ ವಸಂತಿ,
ಜಿಲ್ಲಾ ಮಾಧ್ಯಮ ಪ್ರತಿನಿಧಿ ಲೋಕೇಶ್ ಸುಬ್ರಹ್ಮಣ್ಯ ಹಾಗೂ ಕರುಣಾಕರ ಎಣ್ಣೆಮಜಲು, ದಿನೇಶ್ ಯೆನೇಕಲ್, ಹರೀಶ್ ರಾವ್ ಸುಳ್ಯ, ವೆಂಕಟೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading