Ad Widget

ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ರವರನ್ನು ಭೇಟಿ ಮಾಡಿ ಬೇಡಿಕೆ ಗಳ ಮನವಿ ಸಲ್ಲಿಸಿದ ಸೂಡ ಅಧ್ಯಕ್ಷ ಕೆ.ಎಂ ಮುಸ್ತಫ

ಸುಳ್ಯ ನಗರ ಪಂಚಾಯತ್ ಗೆ ಮಾಸಿಕ ಸಭೆ ನಡೆಸಲು ಆಗಮಿಸಿದ  ಆಡಳಿತಾಧಿಕಾರಿಯಾದ  ತಹಶೀಲ್ದಾರ್ ಶ್ರೀಮತಿ ಮಂಜುಳಾ ರವರನ್ನು ಭೇಟಿ ಮಾಡಿದ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಕೆಲವು ಪ್ರಚಲಿತ ಸಮಸ್ಯೆ ಗಳ ಬಗ್ಗೆ ಚರ್ಚಿಸಿದರು
ಅಮೃತ 2.0 ಯೋಜನೆಯಡಿ ಪೈಪ್ ಲೈನ್ ಗೆ ಅಗೆದ ರಸ್ತೆಯನ್ನು ಸರಿಪಡಿಸುವಂತೆ ಸಂಬಂಧ ಪಟ್ಟವರಿಗೆ ಸೂಚಿಸುವುದು, ಸುಳ್ಯ ನಗರದ ಎಲ್ಲಾ ಬಸ್ ಪ್ರಯಾಣಿಕರ ತಂಗುದಾಣ ವನ್ನು ಏಕ ರೂಪ ಆಧುನಿಕ ವಿನ್ಯಾಸದೊಂದಿಗೆ ವಿವಿಧ ಸ್ವಾಮ್ಯ ಗಳ ಕಂಪನಿಗಳ ಪ್ರಚಾರ ಫಲಕ ಅಳವಡಿಸಿ ದಲ್ಲಿ ಆದಾಯವು ಹೆಚ್ಚುತ್ತದೆ ನಗರ ಸುಂದರೀಕರಣ ವಾಗುತ್ತದೆ ಅಲ್ಲದೇ ತಾಲೂಕು ಕಚೇರಿ ಬಳಿ, ಸರ್ಕಾರಿ ಆಸ್ಪತ್ರೆ ಬಳಿ, ಎ.ಪಿ.ಎಂ.ಸಿ ರಸ್ತೆ ಯಲ್ಲಿರುವ ಸಾರ್ವಜನಿಕ ಶೌಚಾಲಯಗಳಿಗೆ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಿ ಸಾರ್ವಜನಿಕ ಸಮರ್ಪಕ ಬಳಕೆಗೆ ಒದಗಿಸುವುದು, ಸುಸಜ್ಜಿತ ಆಧುನಿಕ ಸೌಕರ್ಯ ಗಳನ್ನು ಒಳಗೊಂಡ ಪುರಭವನ ನಿರ್ಮಾಣಕ್ಕೆ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ (ಕೆ ಯು ಐ ಡಿ ಎಫ್ ಸಿ) ಪ್ರಸ್ತಾವನೆ ಸಲ್ಲಿಸುವುದು, ಮುಖ್ಯ ರಸ್ತೆ ಯ ಸ್ಲಾಬ್ ಗಳಿಗೆ ಕರ್ಬ್ ಸ್ಟೋನ್ ಅಳವಡಿಸಿ ಸ್ಲಾಬ್ ಗಳನ್ನು ಹಾಕಿ ಸಾರ್ವಜನಿಕ ರಿಗೆ ನಡೆದಾಡಲು ಅನುಕೂಲ ಮಾಡಿ ಕೊಡುವುದು, ಜಯನಗರ ವಾರ್ಡ್ ನಲ್ಲಿ ರಸ್ತೆ ತೀರಾ ದುಸ್ಥಿಯಲ್ಲಿದ್ದು ಇಂಟರ್ಲಾಕ್ ಅಳವಡಿಕೆಗೆ ಮೀಸಲಿರಿಸಿದ ಕಾಮಗಾರಿಯನ್ನು ಬದಲಾಯಿಸಿ ರಸ್ತೆ ದುರಸ್ಥಿ ಮಾಡುವುದು ಮೊದಲಾದ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಆಡಳಿತಾ ಧಿಕಾರಿಯವರು ಈ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳುವಂತೆ ಸೂಚಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading