Ad Widget

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ನೇತೃತ್ವದ ತಂಡದ ಪದಗ್ರಹಣ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ನೂತನ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಪ್ರಧಾನ ಕಾರ್ಯದರ್ಶಿ ಶ್ರೀಜಿತ್ ಸಂಪಾಜೆ, ಕೋಶಾಧಿಕಾರಿ ಅನಿಲ್ ಕಳಂಜ ತಂಡದ ಪದಗ್ರಹಣ ಸಮಾರಂಭ ಡಿ.11ರಂದು ಸುಳ್ಯದ ರಂಗ ಮಯೂರಿ ಕಲಾ ಶಾಲೆಯಲ್ಲಿ ನಡೆಯಿತು.
ತಾಲೂಕು ಸಂಘದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಕೊಯಿಂಗೋಡಿಯವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ನಾನು ಈ ಹಿಂದೆ ಸುಳ್ಯ ಸಿಡಿಪಿಒ ಆಗಿದ್ದ ಸಂದರ್ಭ ಇಲಾಖೆಗಳಲ್ಲಾದ ಕೆಲಸ ಕಾರ್ಯಗಳನ್ನು ಎಲ್ಲಾ ಮಾಧ್ಯಮಗಳು ಭಿತ್ತರಿಸಿ ಮಾಹಿತಿ ಪ್ರಚಾರ ಪಡಿಸುತ್ತಿದ್ದರು. ನಾನು ಈ ಹಂತಕ್ಕೆ ಬೆಳೆಯಬೇಕೆಂದರೆ ಮಾಧ್ಯಮಗಳ ಪಾತ್ರ ಬಹಳ ಇದೆ. ಕೆಜೆಯು ಸುಳ್ಯ ಘಟಕದ ನೂತನ ಪದಾಧಿಕಾರಿಗಳು ಸಮಾಜಮುಖಿ ಕಾರ್ಯ ಮಾಡುವುದರೊಂದಿಗೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ” ಎಂದು ಶುಭಹಾರೈಸಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಘಟಕದ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ರವರು ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ತಂಡದ ಪದಗ್ರಹಣ ನೆರವೇರಿಸಿದರು. ಬಳಿಕ ಯಶ್ವಿತ್ ಕಾಳಮ್ಮನೆಯವರ ಅಧ್ಯಕ್ಷತೆಯಲ್ಲಿ ಸಭೆ ಮುಂದುವರಿಯಿತು.
ವೇದಿಕೆಯಲ್ಲಿ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಈಶ್ವರ ವಾರಣಾಸಿ, ಪ್ರಧಾನ ಕಾರ್ಯದರ್ಶಿ ಜ್ಯೋತಿಪ್ರಕಾಶ್ ಪುಣಚ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ಘಟಕದ ಅಧ್ಯಕ್ಷ ರಾಮದಾಸ್ ವೇದಿಕೆಯಲ್ಲಿ ಇದ್ದರು.

ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಈಶ್ವರ ವಾರಣಾಸಿಯವರನ್ನು ಸುಳ್ಯ ತಾಲೂಕು ಘಟಕದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ತಾಲೂಕು ಘಟಕದ ಮಾಜಿ ಕಾರ್ಯದರ್ಶಿ ರಮೇಶ್ ನೀರಬಿದಿರೆ ಸ್ವಾಗತಿಸಿದರು. ನೂತನ ಖಜಾಂಜಿ ಅನಿಲ್ ಕಳಂಜ ವಂದಿಸಿದರು. ತಾಲೂಕು ಘಟಕದ ಮಾಜಿ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಕೆಜೆಯು ಸುಳ್ಯ ಘಟಕಕ್ಕೆ ಕರುಣಾಕರ ಕೆಮ್ಮಾರ, ಚೈತ್ರಾ ವಿನಯ್ ಕೇರ್ಪಳ, ಪ್ರಜ್ಞಾ ಸಾಲಿಯಾನ್ ಕೇರ್ಪಳ, ಲಿಖಿತ ಲೋಕೇಶ್ ಊರುಬೈಲು, ದೇವಪ್ಪ ಹೈದಂಗೂರು, ಹಸೈನಾರ್ ಜಯನಗರ, ಜುಬೈದ್‌ರವರು ಸದಸ್ಯರಾಗಿ ಸೇರ್ಪಡೆಗೊಂಡರು.
ಜಿಲ್ಲಾ ಸಮಿತಿಯ ಸದಸ್ಯರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೇಖಕ ಡಾ. ಸುಂದರ್ ಕೇನಾಜೆ, ಪ್ರಗತಿಪರ ಕೃಷಿಕ ನೂಜಾಲು ಪದ್ಮನಾಭ ಗೌಡ, ಲಯನ್ಸ್ ಪ್ರಾಂತೀಯ ಮಾಜಿ ಅಧ್ಯಕ್ಷೆ ಶ್ರೀಮತಿ ರೇಣುಕಾ ಸದಾನಂದ ಜಾಕೆ, ಪತ್ರಕರ್ತ ಹಸೈನಾರ್ ಜಯನಗರ, ಉದ್ಯಮಿ ವೆಂಕಟೇಶ್ ಮೇನಾಲ ನೂತನ ಅಧ್ಯಕ್ಷ ಯಶ್ವಿತ್ ಕಾಳಂಮನೆಯವರ ಬಗ್ಗೆ ಮಾತನಾಡಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕೆಜೆಯು ಪುತ್ತೂರು ತಾಲೂಕು ಘಟಕದ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಪ್ರಜಾಧ್ವನಿ ಕರ್ನಾಟಕ  ಕೇಂದ್ರೀಯ ಸಮಿತಿಯ ಅಧ್ಯಕ್ಷ ಅಶೋಕ್ ಎಡಮಲೆ,  ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಹಿರಿಯ ಪತ್ರಕರ್ತರುಗಳಾದ ಗಂಗಾಧರ ಮಟ್ಟಿ, ಕೃಷ್ಣ ಬೆಟ್ಟ, ದುರ್ಗಾಕುಮಾರ್ ನಾಯರ್‌ಕೆರೆ, ಶಿವಪ್ರಸಾದ್ ಕೇರ್ಪಳ, ಪದ್ಮನಾಭ ಮುಂಡೋಕಜೆ, ದಯಾನಂದ ಕಲ್ನಾರ್,  ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು, ನಿರ್ದೇಶಕಿ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ,  ಸುಳ್ಯ ಸ.ಮಾ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾ ಶೆಟ್ಟಿ, ಸ್ವರ್ಣಂ ಜ್ಯುವೆಲ್ಲರ್ಸ್‌ನ ಪಾಲುದಾರ ಪ್ರವೀಣ್ ಗೌಡ, ನಿವೃತ್ತ ದೈ.ಶಿ.ಶಿಕ್ಷಕಿ ಎ.ಜಿ ಭವಾನಿ, ನಿವೃತ್ತ ಮುಖ್ಯ ಶಿಕ್ಷಕಿ ವಾರಿಜಾ ಮರಸಂಕ, ತಾಲೂಕು ಗೌಡ ಮಹಿಳಾ ಘಟಕದ ಶ್ರೀಮತಿ ಮೀನಾಕ್ಷಿ ರಾಮಕಜೆ,  ಜಾಲ್ಸೂರು ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಮಂಜುನಾಥ ಮಡ್ತಿಲ, ಸುಂದರ ರಾಮಕಜೆ, ನಿವೃತ್ತ ಮುಖಶಿಕ್ಷಕ ಲೋಕನಾಥ ಕಡಪಳ, ನಿವೃತ್ತ ಮುಖ್ಯ ಶಿಕ್ಷಕ ಸಂಜೀವ ಗೌಡ ಮರಸಂಕ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ಸುಮತಿ ಹುಲಿಮನೆ,  ಚಿತ್ರಕಲಾ ಶಿಕ್ಷಕ ಪ್ರಸನ್ನ ಐವರ್ನಾಡು, ಶ್ರೀಮತಿ ಜಯಕೃಷ್ಣ ಕಾಯರ್ತೋಡಿ, ಶ್ರೀಮತಿ ರೇವತಿ ಕಾಳಂಮನೆ,  ಶ್ರೀಮತಿ ಭಾರತಿ ಕಾಳಂಮನೆ, ಶ್ರೀಮತಿ ಸೋಜಾವತಿ ವೆಂಕಟ್ರಮಣ ಮರ್ಪಂಗಲ್ಲು, ಶ್ರೀಮತಿ ವಾರಿಜಾಕ್ಷಿ ಚಿಕ್ಮುಳಿ, ರಾಮಕೃಷ್ಣ ಪುರಿಯ, ಶ್ರೀಮತಿ ಸೌಮ್ಯ ರಾಮಕೃಷ್ಣ ಪಿ.ಆರ್., ಸೃಜನ್ ಅಲೆಕ್ಕಾಡಿ, ಪುರುಷೋತ್ತಮ ಮುಳ್ಯ,  ಪ್ರಜ್ಞಾ ಎಸ್. ನಾರಾಯಣ ಅಚ್ರಪ್ಪಾಡಿ, ಪೂಜಾಶ್ರೀ ವಿತೇಶ್ ಕೋಡಿ, ನವೀನ್ ಗೋಪಾಲ್ ಸ್ಟುಡಿಯೋ, ಸೌಮ್ಯ ಆಳಂಕಲ್ಯ, ವೇಣುಪ್ರಸಾದ್ ಅಡ್ಯಡ್ಕ, ಶ್ರೀಮತಿ ಸುಮತಿ ಜಯನಗರ, ಗಂಗಾಧರ ಕಾಣಿಯೂರು, ದಿನೇಶ್ ಮುತ್ಲಾಜೆ, ಜಯಶ್ರೀ ಬಿ.ವಿ. ಹಳೆಗೇಟು, ಪ್ರೇಮಾ ಜಯಂತ ಗೌಡ ಅಡ್ಕಾರು ಹಾಗೂ ಕೆಜೆಯು ಘಟಕದ ಪದಾಧಿಕಾರಿಗಳು, ಸುಳ್ಯ ತಾಲೂಕು ಘಟಕದ ಸದಸ್ಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading