Ad Widget

ಐನೆಕಿದು : ಕೂಜುಗೋಡಿನಲ್ಲಿ ತೋಟಗಳಿಗೆ ಆನೆ ದಾಳಿ ; ಕಂಗು, ತೆಂಗು ಹಾಗೂ ಬಾಳೆ ಕೃಷಿಗೆ ಹಾನಿ-ನಷ್ಟ

ಕಡಬ ತಾಲೂಕಿನ ಐನೆಕಿದು ಗ್ರಾಮದ ಜಯಪ್ರಕಾಶ್ ಕೂಜುಗೋಡು ಹಾಗೂ ಸುರೇಶ್ ಕೂಜುಗೋಡು ರವರ ತೋಟಗಳಿಗೆ ಆನೆ ದಾಳಿ ನಡೆಸಿದೆ ಎಂದು ತಿಳಿದುಬಂದಿದ್ದು, ಡಿ.18 ರಂದು ರಾತ್ರಿ ಜಯಪ್ರಕಾಶ್ ಕೂಜುಗೋಡು ರವರ ತೋಟಕ್ಕೆ ಹಾಗೂ ಡಿ.19 ರಂದು ಸುರೇಶ್ ಕೂಜುಗೋಡು ರವರ ತೋಟಕ್ಕೆ ದಾಳಿ ನಡೆಸಿದ ಆನೆ ಕಂಗು, ತೆಂಗು ಹಾಗೂ ಬಾಳೆ ಕೃಷಿಯನ್ನು ನಾಶಪಡಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಯಪ್ರಕಾಶ್ ಕೂಜುಗೋಡು ಅವರು “ಈಗಾಗಲೇ ಕೊಳೆರೋಗ, ಎಲೆಚುಕ್ಕಿ ರೋಗಗಳು ಹಾಗೂ ಕನಿಷ್ಠ ಜಮೆ ಆಗಿರುವ ಬೆಳೆವಿಮೆ ಸೇರಿದಂತೆ ಇನ್ನಿತರ ನಷ್ಟ ಹಾಗೂ ಹಾನಿಗಳಿಂದ ನೊಂದಿರುವ ಕೃಷಿಕರಿಗೆ ಹಾಗೂ ಅವರ ಕೃಷಿಗೆ ಕಾಡುಪ್ರಾಣಿಗಳ ನಿರಂತರ ದಾಳಿಗಳಿಂದ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಎಲ್ಲಾ ಕೃಷಿಕರ ಪರವಾಗಿ ವಿನಂತಿಸುತ್ತೇವೆ” ಎಂದು ಹೇಳಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading