Ad Widget

ನಿಜಮಹಾತ್ಮ ಅಂಬೇಡ್ಕರ್ ನಾಟಕ ಪ್ರದರ್ಶನದ ವೇಳೆ ಜೈಭೀಮ್ ಪದವನ್ನು ಜೈ ಮೀಮ್ ಎಂದು ಬಳಸಿದ್ದಕ್ಕೆ ವಿರೋಧ – ಕೂಡಲೇ ಕ್ಷಮೆಯಾಚಿಸುವಂತೆ ಸುಳ್ಯ ತಾಲೂಕು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ

. . . . . . . . .

ಸುಳ್ಯದಲ್ಲಿ ರಾಷ್ಟ್ರ ಚಿಂತನಾ ವೇದಿಕ ಹಾಗೂ ಆಟೋ ಚಾಲಕರ ಸಂಘ ಭಾರತೀಯ ಮಜ್ದೂರ್ ಸಂಘ ಇದರ ವತಿಯಿಂದ ನಡೆದಿರುವ ನಿಜ ಮಹಾತ್ಮ ಬಾಬಾ ಸಾಹೇಬ್ ಎಂಬ ನಾಟಕದ ಮೂಲಕ ಧನ್ಯವಾದ ಸಂದರ್ಭದಲ್ಲಿ ಅದರ ನಿರ್ದೇಶರ ಅಡ್ಡಂಡ ಕಾರ್ಯಪ್ಪ ಅವರು ಜೈ ಭೀಮ್ ಪದದ ಬಳಕೆ ಮಾಡುವ ವೇಳೆ ಜೈ ಮೀಮ್ ಪದವನ್ನು ಬಳಸಿ ಅಪಹಾಸ್ಯ ಮಾಡುವ ರೀತಿಯಲ್ಲಿ ಹೇಳಿದ್ದು ಖಂಡನೀಯ, ಕೂಡಲೆ ಸಂಬಂಧ ಪಟ್ಟವರು ಕ್ಷಮೆ ಕೇಳಬೇಕೆಂದು ಸುಳ್ಯ ತಾಲೂಕು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ವತಿಯಿಂದ ಡಿ.18ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ.

. . . . . . .

ನಾಟಕ ಪ್ರದರ್ಶನ ಮಾಡಿರುವುದು ತಪ್ಪಲ್ಲ, ಆದರೆ ಈ ನಾಟಕ ಪ್ರದರ್ಶನ ವೇಳೆ ಸಮಾಜವನ್ನು ಒಡೆಯುವ ರೀತಿಯಲ್ಲಿ ಪದಗಳನ್ನು ಬಳಸಿ ಶಾಂತಿಯುತವಾದ ಊರಿನಲ್ಲಿ ಅಶಾಂತಿ ಸೃಷ್ಟಿ ಮಾಡಲು ಅವರು ಹೊರಟಿರುವುದು ಸರಿಯಾದ ಕ್ರಮವಲ್ಲ‌ ಎಂದು ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷ ಸತೀಶ್ ಬೂಡುಮಕ್ಕಿ ಅವರು ಹೇಳಿದರು.

ಯಾವುದೇ ದಾಖಲೆಗಳನ್ನು ಇಟ್ಟುಕೊಳ್ಳಲು ಅನುವು ಮಾಡಿಕೊಡದ ರೀತಿಯಲ್ಲಿ ಮತ್ತು ವಿಡಿಯೋ ಚಿತ್ರೀಶರಣ ಮಾಡಲು ಅವಕಾಶ ನೀಡದೆ ನಾಟಕದ ಪ್ರದರ್ಶನದ ಸಾಕ್ಷ್ಯವನ್ನೇ ಮಾಡಲು ಕೂಡ ಅನುವು ಮಾಡಿಕೊಡದೆ ಇರುವುದು ಕೂಡ ಬೇರೆ ಬೇರೆ ಅನುಮಾನಗಳಿಗೆ
ಕಾರಣವಾಗಿದೆ. ನಾವು ಅಲ್ಲಿ ಇದ್ದರೂ ಕೂಡ ಕಾರ್ಯಕ್ರಮವನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಕಾರಣ ಉತ್ತಮ ಒಂದು ಕಾರ್ಯ ನಡೆಯುವುದಾದರೆ ಅದನ್ನು ನಾವು ತಡೆಯುವುದು ಸರಿಯಲ್ಲ ಎಂದು ಅಲ್ಲಿ ನಾವು ಶಾಂತಿಯುತವಾಗಿ ಇದ್ದೆವು.

ಆದರೆ ಇಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅಶಾಂತಿ ಉಂಟು ಮಾಡಲು ಹೊರಟಿರುವುದು ಸರಿಯಾದ ವಿಧಾನವಲ್ಲ ಆದ್ದರಿಂದ ಅವರು ಕ್ಷಮೆಯಾಚನೆ ಮಾಡಬೇಕು ಎಂದು ಹೇಳಿದರು.

ಪದ ಬಳಕೆಯ ಬಗ್ಗೆ ಕೇಳಿದಾಗ ಇದು ನಿಮಗಾಗಿ ಹೇಳಿರುವುದಲ್ಲ ಮುಸಲ್ಮಾನರಿಗಾಗಿ ನಾವು ಈ ಪದವನ್ನು ಹೇಳಿದ್ದೇವೆ ಎಂದು ಕೆಲವು ಸಂಘಟಕರು ನಮ್ಮಲ್ಲಿ ಹೇಳಿದಾಗ ಇಲ್ಲಿ ಮುಸಲ್ಮಾನರೇ ಇಲ್ಲ. ಆದರೂ ಕೂಡ ಈ ಪದವನ್ನು ಯಾಕೆ ನೀವು ಬಳಸಿದ್ದೀರಿ ಎಂದು ನಾವು ಮರು ಪ್ರಶ್ನೆ ಮಾಡಿದ್ದೇವೆ. ಆಗ ಉತ್ತರಿಸದೆ ಅಲ್ಲಿಂದ ಅವರು ತೆರಳಿದ್ದಾರೆ. ಇವೆಲ್ಲವನ್ನೂ ನೋಡಿದಾಗ ಈ ಕಾರ್ಯಕ್ರಮದ ಮೂಲಕ ಊರಿನಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ‌. ಇದು ಆಗಬಾರದು ಈ ರೀತಿಯ ನಾಟಕ ಪ್ರದರ್ಶನದಿಂದ ಸಮಾಜಕ್ಕೆ ಏನೂ ಲಾಭವಿಲ್ಲ.ಸಮಾಜದ ಒಳ್ಳೆಯ ಕೆಲಸಕ್ಕೆ ಬೇಕಾದರೆ ಅಂಬೇಡ್ಕರ್ ಅವರ ಹೆಸರನ್ನು ಬಳಸಿ. ರಾಜಕೀಯ ಪಕ್ಷಗಳು ಅವರವರ ಲಾಭಕ್ಕಾಗಿ ಅಂಬೇಡ್ಕರ್ ಅವರ ಹೆಸರು ಎಳೆದು ತರುವುದು ದುರದೃಷ್ಟಕರ ಎಂದು ಅವರು ಹೇಳಿದರು.

ಕ್ಷಮೆಯಾಚನೆ ಮಾಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಈ ರೀತಿಯ ನಾಟಕಗಳಿಂದ ಸಮಾಜಕ್ಕೆ ಯಾವುದೇ ರೀತಿಯ ಉತ್ತಮ ಸಂದೇಶ ಇರುವುದಿಲ್ಲ. ಜೈ ಭೀಮ್ ಎಂಬ ಪದಕ್ಕೆ ತುಂಬಾ ಮಹತ್ವವಾದ ಅರ್ಥವಿದೆ. ಅದನ್ನು ಯಾವುದೇ ರಾಜಕೀಯ ಪಕ್ಷದವರು ಅವರವರ ಲಾಭಕ್ಕಾಗಿ ದುರುದ್ದೇಶದಿಂದ ಬಳಸಿಕೊಳ್ಳಬಾರದು. ಅದ್ದರಿಂದ ಸಂಬಂಧಪಟ್ಟವರು ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ರಾಜಕೀಯ ರಹಿತವಾಗಿ ಸಮಾನ ಮನಸ್ಕರನ್ನು ಸೇರಿಸಿಕೊಂಡು ಉಗ್ರ ಹೋರಾಟ ಮಾಡುವುದಾಗಿ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯವರು ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆದಿ ದ್ರಾವಿಡ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ ಆಲಡ್ಕ, ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಲ್ಲತಡ್ಕ, ಗೌರವ ಸಲಹೆಗಾರ ಎಂ ಬಿ ಚೋಮ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಅಜ್ಜಾವರ ಗ್ರಾಮ ಸಮಿತಿಯ ಅಧ್ಯಕ್ಷ ಹರೀಶ್ ಮೆನಾಲ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading