Ad Widget

ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಯಲ್ಲಿ “ವಿದ್ಯಾ ವೈಭವ” ವಿನೂತನ ಸಾಂಸ್ಕೃತಿಕ ಹಬ್ಬ

ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಆವರಣದಲ್ಲಿ ಡಿ.10ರಂದು “ವಿದ್ಯಾ ವೈಭವ” ವಿನೂತನ ಸಾಂಸ್ಕೃತಿಕ ಹಬ್ಬ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರಾದ ಬಿ.ವಿ ಶಗ್ರಿತ್ತಾಯ ತೆಂಗಿನ ಮರದ ಹಿಂಗಾರವನ್ನು ಅರಳಿಸುವುದರ ಮೂಲಕ ನಡೆಸಿದರು.

ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಯು.ರಾಧಾಕೃಷ್ಣರಾವ್ ಸ್ವಾಗತಿಸಿದರು. ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿದ್ಯಾಬೋಧಿನೀ ಪ್ರೌಢಶಾಲೆಯ ಸುಮಾರು 400 ವಿದ್ಯಾರ್ಥಿಗಳು ವಿಶಾಲವಾದ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಸಾಹಸಮಯ ಕ್ರೀಡಾ ಚಟುವಟಿಕೆಗಳನ್ನು ಸುಮಾರು ಮೂರು ಗಂಟೆಗಳ ಕಾಲ ಪ್ರದರ್ಶಿಸಿದರು. ಈ ವೈಭವವನ್ನು ವೀಕ್ಷಿಸಲು ಅಭ್ಯಾಗತರಾಗಿ ಬಿಗ್ ಬಾಸ್ ಖ್ಯಾತಿಯ ನಟ ಹಾಗೂ ಹಿನ್ನೆಲೆ ಧ್ವನಿ ಕಲಾವಿದರಾದ ಬಡೆಕ್ಕಿಲ ಪ್ರದೀಪ್ ಭಾಗವಹಿಸಿ, ಮಕ್ಕಳ ಪ್ರದರ್ಶನವನ್ನು ಮೆಚ್ಚಿದರಲ್ಲದೆ, ವೀಕ್ಷಕರನ್ನು ರಂಜಿಸಲು ಬಿಗ್ ಬಾಸ್ ಡೈಲಾಗ್ ಹೇಳಿದರು.

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಹಕಾರಿ ಅಧ್ಯಕ್ಷ ಅಜಿತ್ ರಾವ್ ಕಿಲಂಗೋಡಿ, ಸಾಂದೀಪನಿ ವಿದ್ಯಾಲಯದ ಸಂಚಾಲಕರಾದ ಭಾಸ್ಕರ್ ಆಚಾರ್ ಹಾಗೂ ಕರ್ನಾಟಕ ಬ್ಯಾಂಕ್ ನಿಂತಿಕಲ್ಲು ಶಾಖೆಯ ಪ್ರಬಂಧಕರಾದ ರಾಮಚಂದ್ರ ಎಚ್ ಉಪಸ್ಥಿತರಿದ್ದರು.

ಉಭಯ ಸಂಸ್ಥೆಗಳ ಎಸ್‌.ಡಿ.ಎಂ.ಸಿ ಅಧ್ಯಕ್ಷರುಗಳು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಸಹಕರಿಸಿದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ವಿಶಿಷ್ಟವಾದ ದೀಪಾರತಿಯೊಂದಿಗೆ ಮುಕ್ತಾಯಗೊಂಡಿತು. ಮುಖ್ಯ ಶಿಕ್ಷಕ ಉದಯಕುಮಾ‌ರ್ ರೈ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading