Ad Widget

ಸುಬ್ರಹ್ಮಣ್ಯ : ಹೆದ್ದಾರಿ ಪರಿಸರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ

ಸುಬ್ರಹ್ಮಣ್ಯ ಡಿಸೆಂಬರ್ 15 : ನಾಗರಾಧನೆಯ ಪುಣ್ಯಕ್ಷೇತ್ರ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಇಡಿ ಪ್ರಪಂಚದಲ್ಲಿ ನಾಗರಾಧನೆಗೆ ಹೆಸರುವಾಸಿಯಾದ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನನಿತ್ಯ ಸಾವಿರಾರು ಭಕ್ತರು ಶ್ರೀ ದೇವರ ದರ್ಶನ ಹಾಗೂ ಸೇವೆಗಾಗಿ ಬರುತ್ತಿದ್ದಾರೆ. ಆದರೆ ಎಲ್ಲೆಡೆ ಹೆದ್ದಾರಿ ಬದಿಗಳಲ್ಲಿ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನು ಎಸೆದು ಹೋಗುತ್ತಿರುವುದು ಕಳೆದ ಹಲವಾರು ವರ್ಷಗಳಿಂದ ಕಂಡುಬಂದಿದೆ. ಪ್ರತಿ ಬಾರಿಯೂ ವಾರದಲ್ಲಿ ಒಂದು ದಿನ ಸ್ಥಳೀಯ ಡಾ.ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನವರು ಕುಮಾರಧಾರ ಸ್ನಾನಘಟ್ಟ ಹಾಗೂ ಸೇತುವೆ ಭಾಗ ಮತ್ತು ಕುಲ್ಕುಂದದವರೆಗಿನ ರಸ್ತೆಯ ಅಕ್ಕಪಕ್ಕದಲ್ಲಿ ಇರುವ ಕಸಗಡ್ಡಿಗಳು, ಪ್ಲಾಸ್ಟಿಕ್ ಚೀಲ, ಇನ್ನಿತರ ವಸ್ತುಗಳನ್ನು ಶೇಖರಿಸಿ  ಸ್ವಚ್ಛಗೊಳಿಸುವ ಕೆಲಸವನ್ನು ಕೈಗೊಂಡಿರುತ್ತಾರೆ. ಈ ಬಾರಿ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವಿವಿಧ ಗುಂಪುಗಳನ್ನು ರಚಿಸಿ ಒಂದೊಂದು ಗುಂಪಿಗೆ ಒಂದೊಂದು ಜವಾಬ್ದಾರಿ ನೀಡಿರುತ್ತಾರೆ.
ಮೊದಲನೇ ತಂಡದಲ್ಲಿ ಸುಮಾರು 10-20 ಜನ ಇದ್ದು ಪೂರ್ತಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವರು. ಸ್ವತಹ ಡಾ. ರವಿ ಕಕ್ಕೆಪದವು ಅವರೇ ನಿಂತು ಅವರ ಸ್ವಯಂಸೇವಕರಿಂದ ಈ ಸ್ವಚ್ಛದ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದಾರೆ.

ಸಾರ್ವಜನಿಕರಿಗೆ ಸ್ವಚ್ಛತಾ ಸಂದೇಶ : “ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳನ್ನು ತರಬಾರದು. ಹಾಗೊಂದು ವೇಳೆ ತಂದಲ್ಲಿ ಅದನ್ನ ಪಕ್ಕದಲ್ಲಿರುವ ಕಸದ ಡಬ್ಬಿಗೆ ಹಾಕಬೇಕು ಹಾಗೂ ಪ್ಲಾಸ್ಟಿಕ್ ಬಾಟಲ್ ಚೀಲ ಅಥವಾ ಇನ್ನಿತರ ಪ್ಲಾಸ್ಟಿಕ್ ವಸ್ತುಗಳು ತಮ್ಮಲ್ಲಿದ್ದರೆ ಅದನ್ನು ಹಾಗೆ ತಮ್ಮ ಊರಿಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡಿ ಒಟ್ಟಾಗಿ ನಮ್ಮ ಪರಿಸರವನ್ನು ಸ್ವಚ್ಛತೆಯಿಂದ ಇರಿಸಿಕೊಳ್ಳಲು ಶ್ರಮಿಸೋಣ. ಪ್ಲಾಸ್ಟಿಕ್ ಬಾಟಲ್, ಕಾಗದ, ಚೀಲ, ಪ್ಲೇಟುಗಳನ್ನು ತಿಂದಂತಹ ಪ್ರಾಣಿಗಳು ನರಕಯಾತನೆ ಅನುಭವಿಸುತ್ತಿರುವುದನ್ನು ಕೂಡ ನಾವು ನೋಡಬಹುದು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಪ್ಲಾಸ್ಟಿಕ್ ಮುಕ್ತ ಕ್ಷೇತ್ರವಾಗಿರುವುದರಿಂದ ಎಲ್ಲಾ ಭಕ್ತಾದಿಗಳು ಸಹಕರಿಸಬೇಕು” ಎಂದು ವಿನಂತಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading