Ad Widget

ಬೆಳ್ಳಾರೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ  ಸಮಾರೋಪ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಯವರ ಕಛೇರಿ ಸುಳ್ಯ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ.05 ಮತ್ತು 06ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಸಮಾರೋಪ ಸಮಾರಂಭ ಡಿ.6ರಂದು ಸಂಜೆ ಜರುಗಿತು.
ಈ ಸಮಾರೋಪ ಸಮಯದಲ್ಲಿ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹರ್ಷ ಜೋಗಿಬೆಟ್ಟು ವಹಿಸಿದ್ದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೀತಲ್ ಯು.ಕೆ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ವಿಠಲ್ ದಾಸ್, ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಧರ, ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿಗಳಾದ ನಾರಾಯಣ.ಬಿ ಬೆಳ್ಳಾರೆ ಕೆ.ಪಿ.ಎಸ್ ಪ್ರಾಂಶುಪಾಲರಾದ ಜನಾರ್ಧನ ಕೆ.ಎನ್, ಕೆ.ಪಿ.ಎಸ್ ಶಿಕ್ಷಕರಾದ ಮಿಯ್ಯಗೆ.ಬಿ, ಸಂಧ್ಯಾಕುಮಾರಿ ಬಿ.ಎಸ್, ಎಸ್.ಡಿ.ಎಂ.ಸಿ ಸದಸ್ಯರಾದ ನವೀನ್ ಸಾರಕೆರೆ, ಶರತ್ ಪೂಗವನ, ಜಮಾಲ್ ಮಣಿಮಜಲು, ಶಿವಾಜಿ ಮಣಿಮಜಲು, ನಸೀಮ ಪಂಜಿಗಾರು, ಶಾಹಿನ, ಮುರಳಿಕೃಷ್ಣ, ಸೌಮ್ಯ, ಧನ್ಯ ಎ.ಜೆ, ಬೆಳ್ಳಾರೆಯ ಕಿರಣ್ ಪ್ರಿಂಟರ್ಸ್ ಮಾಲಕರಾದ ಅಕ್ಷಯ್
ಪದ್ಯಾಣ, ಜಲಧಿ ಟೂರ್ಸ್ ಮತ್ತು ಟ್ರಾವೆಲ್ಸ್ ನ ರಕ್ಷಿತ್ ಪೆರುವಾಜೆ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲರಾದ ಉಮಾಕುಮಾರಿ ಸ್ವಾಗತಿಸಿದರು.
ಮುಖ್ಯ ಶಿಕ್ಷಕರಾದ ಮಾಯಿಲಪ್ಪ.ಜಿ ವಂದನಾರ್ಪಣೆ ಮಾಡಿದರು.
ಪುಷ್ಪಾವತಿ.ಪಿ ಕಾರ್ಯಕ್ರಮ ನಿರೂಪಿಸಿದರು.

ಈ ಪ್ರತಿಭಾ ಕಾರಂಜಿ ಸ್ಪರ್ಧೆಯ ಫಲಿತಾಂಶ ಪಟ್ಟಿ ಈ ಕೆಳಗಿನಂತಿದೆ
ಎರಡು ದಿನ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 1ರಿಂದ 4ನೇ ತರಗತಿ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕೆ.ಪಿ.ಎಸ್ ಬೆಳ್ಳಾರೆ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ರೋಟರಿ ಶಾಲೆ ಸುಳ್ಯ, ತೃತೀಯ ಸ್ಥಾನವನ್ನು ಸ.ಕಿ.ಪ್ರಾ ಶಾಲೆ ಪಾಂಡಿಗದ್ದೆ ಪಡೆದುಕೊಂಡಿತು.
5ರಿಂದ 7ನೇ ತರಗತಿ ವಿಭಾಗದಲ್ಲಿ ಪ್ರಥಮ ಸಮಗ್ರ ಸ್ಥಾನವನ್ನು ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ದ್ವಿತೀಯ ಸಮಗ್ರ ಸ್ಥಾನವನ್ನು ಕೆ.ಪಿ.ಎಸ್ ಬೆಳ್ಳಾರೆ, ತೃತೀಯ ಸಮಗ್ರ ಸ್ಥಾನವನ್ನು ಸೈಂಟ್ ಜೋಸೆಫ್ ಸುಳ್ಯ ಪಡೆದುಕೊಂಡಿತು.
8ರಿಂದ 10ನೇ ತರಗತಿ ವಿಭಾಗದಲ್ಲಿ ಪ್ರಥಮ ಸಮಗ್ರ ಸ್ಥಾನವನ್ನು ಕೆ.ಪಿ.ಎಸ್ ಬೆಳ್ಳಾರೆ, ದ್ವಿತೀಯ
ಸಮಗ್ರ ಸ್ಥಾನವನ್ನು ರೋಟರಿ ಆಂಗ್ಲಮಾಧ್ಯಮ ಶಾಲೆ ಸುಳ್ಯ, ತೃತೀಯ ಸಮಗ್ರ ಸ್ಥಾನವನ್ನು ಸತ್ಯಸಾಯಿ ಚೊಕ್ಕಾಡಿ ಮತ್ತು ಸ.ಪ.ಪೂ ಕಾಲೇಜು ಸುಳ್ಯ ಪಡೆದುಕೊಂಡಿತು.

ವರದಿ : ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading