Ad Widget

ಪಂಜ ಗ್ರಾಮ ಪಂಚಾಯತ್ ಅವ್ಯವಹಾರ ; ದ.ಸಂ.ಸ ವತಿಯಿಂದ ತನಿಖಾ ತಂಡದ ಮೂಲಕ ಜಿ.ಪಂ ಸಿ.ಇ.ಒ ಗೆ ಮನವಿ

ಸುಳ್ಯ ತಾಲೂಕು ಪಂಜ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ ಎನ್ನಲಾದ ಹಣದ ಅವ್ಯವಹಾರದ ಬಗ್ಗೆ ತಾಲೂಕು ಪಂಚಾಯತ್ ನಿಂದ ನೇಮಕಗೊಂಡಿರುವ ತನಿಖಾ ತಂಡದ ನೇತೃತ್ವ ವಹಿಸಿರುವ ದೇವರಾಜ್ ಮುತ್ಲಾಜೆಯವರ ಮೂಲಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ದ.ಸಂ.ಸ ವತಿಯಿಂದ ಲಿಖಿತ ರೂಪದ ಮನವಿಯನ್ನು ನೀಡಲಾಯಿತು.
ಇದರ ಪ್ರತಿಯನ್ನು ತಾ.ಪಂ  ಕಾರ್ಯನಿರ್ವಹಣಾಧಿಕಾರಿಯವರಿಗೂ ಇವರ ಮೂಲಕ ಕೊಡಲಾಗಿದೆ. ದಲಿತ ನೌಕರರಾದ ಬಾಬುರವರು ಗ್ರಾಮ ಪಂಚಾಯತ್ ಗೆ ಯಾವುದೇ ರೀತಿಯಲ್ಲಿ ಹಣದ ಅವ್ಯವಹಾರ ಮಾಡಿ ವಂಚಿಸಿರುವುದಿಲ್ಲ ಮತ್ತು ಇದಕ್ಕೆ ನೇರ ಹೊಣೆಗಾರರಾದ ಪಂಚಾಯತ್ ಪಿ.ಡಿ.ಒ, ಪಂಚಾಯತ್ ಕಾರ್ಯದರ್ಶಿ ಹಾಗೂ ಡಾಟಾ ಆಪರೇಟರ್ ಶ್ರೀಮತಿ ಗೀತಾ ಮತ್ತು ಪಂಚಾಯತ್ ಉಪಾಧ್ಯಕ್ಷರಾದ ನಾರಾಯಣ.ಎಸ್.ರವರು ಶಾಮಿಲಾಗಿದ್ದು, ಇವರನ್ನು ಅಮಾನತು ಮಾಡಬೇಕೆಂದು ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಪಂಚಾಯತ್ ನೌಕರ ಬಾಬು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ರಿ.) ತಾಲೂಕು ಸಂಚಾಲಕ ಅಚ್ಚುತ ಮಲ್ಕಜೆ, ದ.ಸಂ.ಸ ಮೈಸೂರು ವಿಭಾಗೀಯ ಸಂಚಾಲಕ ಆನಂದ ಬೆಳ್ಳಾರೆ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading