Ad Widget

ಐವರ್ನಾಡಿನಲ್ಲಿ 72ನೇ ಮಾಸಿಕ ಸ್ವಚ್ಛತಾ ಕಾರ್ಯಕ್ರಮ

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ನಡೆಯುವ 72 ನೇ ಮಾಸಿಕ ಸ್ವಚ್ಛತಾ ಕಾರ್ಯಕ್ರಮವು ಇಂದು ಮಂಜುಶ್ರೀ ಗೆಳೆಯರ ಬಳಗ(ರಿ‌.) ಪಾಲೆಪ್ಪಾಡಿ ಐವರ್ನಾಡುರವರ ಸಹಯೋಗದೊಂದಿಗೆ ಐವರ್ನಾಡು ಗ್ರಾಮ ಪಂಚಾಯತ್ ವಠಾರ ಹಾಗೂ ಮುಖ್ಯ ರಸ್ತೆ ಯ ಬದಿಯಲ್ಲಿ ಮರ್ವತಡ್ಕದವರೆಗೆ ನಡೆಯಿತು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಐವರ್ನಾಡು ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಸಿಬ್ಬಂದಿಗಳು ಹಾಗೂ ಮಂಜುಶ್ರೀ ಗೆಳಯರ ಬಳಗ(ರಿ.) ಪಾಲೆಪ್ಪಾಡಿ  ಐವರ್ನಾಡಿನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಊರಿನ ಪ್ರಮುಖರು ಸ್ವಚ್ಛತಾ ಕಾರ್ಯದಲ್ಲಿ  ಭಾಗವಹಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಮಂಜುಶ್ರೀ ಗೆಳೆಯರ ಬಳಗ(ರಿ.) ಪಾಲೆಪ್ಪಾಡಿರವರ ವತಿಯಿಂದ ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading