Ad Widget

ಸ್ಪೀಕರ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ – 9/11 ಏಕ ನಿವೇಶನ ವಿನ್ಯಾಸ ಅನುಮೋದನೆ ಸಮಸ್ಯೆ ಬಗ್ಗೆ ಚರ್ಚೆ – ಸಭೆಯಲ್ಲಿ ಪಾಲ್ಗೊಂಡ ಸೂಡ ಅಧ್ಯಕ್ಷ ಕೆ. ಎಂ.ಮುಸ್ತಫ

ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ರವರು ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿ ಪ್ರಜಾ ಸೌದದಲ್ಲಿ ನಗರಾಭಿವೃದ್ಧಿ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನೆ ಆಯುಕ್ತಾಲಯ, ಕಂದಾಯ ಇಲಾಖೆ, ಆರ್.ಡಿ.ಪಿ.ಆರ್, ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆ 9/11 ಮತ್ತು ಏಕನಿವೇಶನ ವಿನ್ಯಾಸ ಅನುಮೋದನೆ, ಕನ್ವರ್ಷನ್ ಸಮಸ್ಯೆ ಮತ್ತು ಕಾನೂನು ತೊಡಕುಗಳ ಬಗ್ಗೆ ಚರ್ಚಿಸಿ, ವಿಚಾರ ವಿಮರ್ಶೆ ಮಾಡಿ ಸ್ಥಳದಲ್ಲೇ ಪರಿಹಾರ ಸೂಚಿಸಲಾಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುಳ್ಯ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ ಮುಸ್ತಫ ಕನ್ವರ್ಷನ್, 9&11 ಗೆ ಪ್ರಮುಖವಾಗಿ ರಸ್ತೆ ಸಮಸ್ಯೆ ಹೆಚ್ಚಾಗಿದ್ದು, ಅರ್ಜಿದಾರರ ಮಾಲಕತ್ವದಲ್ಲಿ ಇಲ್ಲದೆ ಇರುವ ಜಮೀನುಗಳ ಬಗ್ಗೆ ರಸ್ತೆಯ ಅಂಶ ಬಿಟ್ಟು ಕೊಡುವ ಬದಲು ಹಾಲಿ ಇರುವ ರಸ್ತೆಯ ಬಗ್ಗೆ ಅಫಿಡವಿಟ್ ಪಡಕೊಂಡು  ಅನುಮೋದನೆ ನೀಡುವುದು
3 ಬಾರಿ ಪಂಚಾಯತ್ ಗೆ ಹೋಗಿ ಬರುವುದು, ವಿವಿಧ ಇಲಾಖೆಗಳಿಗೆ ಪತ್ರ ಬರೆದು ಕಾಲ ವಿಳಂಬವಾಗುವುದನ್ನು ತಪ್ಪಿಸಬೇಕೆಂದು ವಿನಂತಿಸಿದರು. ಈ ಬಗ್ಗೆ 10 ದಿನದ ಒಳಗಾಗಿ ಆದೇಶ ಹೊರಡಿಸುವುದಾಗಿ ಸರ್ಕಾರದ ಯು‌.ಡಿ ಕಾರ್ಯದರ್ಶಿಯವರು ತಿಳಿಸಿದರು.
ಇತರ ವಿಷಯಗಳಾದ ಕಾಲ ಮಿತಿಯೊಳಗೆ ಅರ್ಜಿ ಗಳ ವಿಲೇವಾರಿ, ಈ ಭಾಗವನ್ನು ಹಿಲ್ ಮತ್ತು ಕೋಸ್ಟಲ್ ಏರಿಯಾ ಎಂದು ಪರಿಗಣಿಸಿ ರಸ್ತೆಯನ್ನು 13 ಫೀಟ್ ಗಳಿಗೆ ಇಳಿಸುವುದು, ಕಮರ್ಶಿಯಲ್ ಉದ್ದೇಶ 9 ಮೀಟರ್ ಗಳಿಗೆ ನಿರ್ಬಂದಿಸುವ ಬಗ್ಗೆ ನಿಯಮಾವಳಿಗಳನ್ನು  ತಿದ್ದುಪಡಿ ಮಾಡುವುದಾಗಿ ಕಾರ್ಯದರ್ಶಿ ಯವರು ಹೇಳಿದರು.
ಸಭೆಯಲ್ಲಿ ಸರ್ಕಾರದ ನಗರಾಭಿವೃದ್ಧಿ ಕಾರ್ಯದರ್ಶಿ ದೀಪಾಚೋಳನ್ ಐ.ಎ.ಎಸ್, ನಗರ ಮತ್ತು ಗ್ರಾಮಾಂತರ ಯೋಜನೆ ಆಯುಕ್ತರಾದ ವೆಂಕಟಾ ಚಲಪತಿ ಐ.ಎ.ಎಸ್, ನಿರ್ದೇಶಕರಾದ ತಿಪ್ಪೇಸ್ವಾಮಿ,  ಜಂಟಿ ನಿರ್ದೇಶಕರಾದ ಗೋಪಾಲ ಕೃಷ್ಣ, ದ.ಕ ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್ ಐ.ಎ.ಎಸ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಮೈಸೂರು ಡಿ.ಟಿ.ಸಿ.ಪಿ ವಿಭಾಗೀಯ ಅಧಿಕಾರಿ ಶ್ರೀಮತಿ ಪಂಕಜಾ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading