Ad Widget

ಆಮೆಗತಿಯಲ್ಲಿ ಸಾಗುತ್ತಿರುವ ಸುಳ್ಯ 108 ಆಂಬುಲೆನ್ಸ್ ದುರಸ್ತಿ ಕಾರ್ಯ ; ತುರ್ತು ಸಂದರ್ಭಗಳಲ್ಲಿ ಅಂಬುಲೆನ್ಸ್ ಗಾಗಿ ಪರದಾಡುತ್ತಿರುವ ರೋಗಿಗಳು

ಸುಳ್ಯದ 108 ಆಂಬುಲೆನ್ಸ್ ವಾಹನವು ದುರಸ್ತಿ ಕಾರ್ಯಕ್ಕಾಗಿ ಮಂಗಳೂರಿನ ಶೋರೂಂ ಗೆ ತೆರಳಿ ತಿಂಗಳಾದರೂ ಇದುವರೆಗೂ ದುರಸ್ತಿ ಕಾರ್ಯ ಆರಂಭವಾಗಿಲ್ಲ ಎಂಬ ಮಾಹಿತಿ ಬಲ್ಲಮೂಲಗಳಿಂದ ತಿಳಿದುಬಂದಿದೆ.
ಸರಕಾರ ಹಾಗೂ 108 ಆಂಬುಲೆನ್ಸ್ ಗುತ್ತಿಗೆ ಪಡೆದಿರುವ ಜಿವಿಕೆ ಸಂಸ್ಥೆಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದಿರುವ 108 ಆಂಬುಲೆನ್ಸ್ ದುರಸ್ತಿ ಕಾರ್ಯದಿಂದಾಗಿ ಜನಸಾಮಾನ್ಯರು, ರೋಗಿಗಳು ಪರದಾಡುವಂತಾಗಿದೆ.
ಸುಳ್ಯ ಸರಕಾರಿ ಆಸ್ಪತ್ರೆಯಿಂದ ರೋಗಿಗಳನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲು ಸುಳ್ಯ ತಾಲೂಕು ಆಸ್ಪತ್ರೆ ಆಂಬುಲೆನ್ಸ್ ಲಭ್ಯವಿದ್ದರೂ ಚಾಲಕರು ಇಲ್ಲ ಎಂಬ ಸಬೂಬು ನೀಡಿ ದೂರದ ಬೆಳ್ಳಾರೆ ಅಥವಾ ಸುಬ್ರಹ್ಮಣ್ಯದ 108 ಆಂಬುಲೆನ್ಸ್ ಮೇಲೆ ಅವಲಂಬಿತವಾಗುವ ಅನಿವಾರ್ಯ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದಾಗಿ ಬೆಳ್ಳಾರೆಯಂತಹ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಸುಬ್ರಹ್ಮಣ್ಯದಂತಹ ಪ್ರವಾಸಿ ಕೇಂದ್ರದಲ್ಲಿ ತುರ್ತು ಸಂದರ್ಭದಲ್ಲಿ ರೋಗಿಗಳು ಆಂಬುಲೆನ್ಸ್ ಗಾಗಿ ಪರದಾಡುವಂತಾಗಿದೆ.
ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಈ ವಿಚಾರದಲ್ಲಿ ಗಮನಹರಿಸಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading