Ad Widget

ಸುಳ್ಯ : “ಜೀವ ಪ್ರಾವಿಣ್ಯ” ತರಬೇತಿ ಕಾರ್ಯಾಗಾರ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ, ಸವಿತಾ ಸಮಾಜ ಸುಳ್ಯ ತಾಲೂಕು, ಬಾರ್ಬರ್ ಅಸೋಸಿಯೇಷನ್ ಸುಳ್ಯ ತಾಲೂಕು ಇವರುಗಳ ಸಹಯೋಗದಲ್ಲಿ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವರ ಸಹಕಾರದೊಂದಿಗೆ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಯುವ ಸದನದಲ್ಲಿ ಅ.28 ರಂದು ಸಾರ್ವಜನಿಕ ಸ್ಥಳಗಳಲ್ಲಿ ಯಾವುದಾದರೂ ವ್ಯಕ್ತಿಗಳಿಗೆ ಹೃದಯಾಘಾತ ಸಂಭವಿಸಿದಲ್ಲಿ ತಕ್ಷಣಕ್ಕೆ ಅವರ ಜೀವ ಉಳಿಸುವ ನಿಟ್ಟಿನಲ್ಲಿ ಸಿ.ಪಿ.ಆರ್ ಪ್ರಥಮ ಚಿಕಿತ್ಸೆಯನ್ನು ಯಾವ ರೀತಿ ನೀಡಬೇಕು ಎಂಬ ವಿಷಯದ ಬಗ್ಗೆ ಹಾಗೂ ಹೃದಯದ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬ ವಿಷಯದ ಕುರಿತು “ಜೀವ ಪ್ರಾವಿಣ್ಯ” ತರಬೇತಿ ಕಾರ್ಯಾಗಾರವನ್ನು ನಡೆಸಲಾಯಿತು.
ಸುಳ್ಯ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ`| ನವೀನ್.ಎನ್.ಎಸ್ ಶಿಬಿರವನ್ನು ಉದ್ಘಾಟಿಸಿದರು.
ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಎ.ಜೆ ಆಸ್ಪತ್ರೆಯ ತುರ್ತು ನಿಗಾ ಘಟಕದ ತಾಂತ್ರಿಕ ತಜ್ಞರಾದ ಕು.ಪುಜೈಲ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಸುಳ್ಯ ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷರಾದ ದೀಪಕ್ ಕುತ್ತಮೊಟ್ಟೆ, ಸುಳ್ಯ ತಾಲೂಕು ಬಾರ್ಬರ್ ಅಸೋಸಿಯೇಷನ್ ಅಧ್ಯಕ್ಷರಾದ ಪದ್ಮನಾಭ.ಎಸ್, ಸುಳ್ಯ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಉದಯ್ ಜಟ್ಟಿಪಳ್ಳ ಹಾಗೂ ಯುವಜನ ಸಂಯುಕ್ತ ಮಂಡಳಿಯ ಕಾರ್ಯದರ್ಶಿಗಳಾದ ಮುರಳಿ ನಳಿಯಾರು ಉಪಸ್ಥಿತರಿದ್ದರು.
ಮುರಳಿ ನಳಿಯಾರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಾರ್ಬರ್ ಅಸೋಸಿಯೇಷನ್ ಕಾರ್ಯದರ್ಶಿಗಳಾದ ಭವಾನಿಶಂಕರ ಜಟ್ಟಿಪಳ್ಳ ಧನ್ಯವಾದ ಸಮರ್ಪಿಸಿದರು.
ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ಗುರುರಾಜ್ ಅಜ್ಜಾವರ ಕಾರ್ಯಕ್ರಮ ನಿರೂಪಣೆ ಮಾಡಿದರು, ಪ್ರವೀಣ್ ಜಯನಗರ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading