Ad Widget

ಕಸ ಎಸೆದವರ ಬೆಂಬೆತ್ತಿ ಜಾಗೃತಿ…!

ಕುಕ್ಕೆ ಸುಬ್ರಹ್ಮಣ್ಯ : ಕುಮಾರಧಾರೆಗೆ ತ್ಯಾಜ್ಯ ಎಸೆದ ಬೆಂಗಳೂರಿನ ಪ್ರವಾಸಿಗರಿಗೆ ದಂಡ

ಸುಬ್ರಹ್ಮಣ್ಯ ಅ.23 : ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಗೆ ತ್ಯಾಜ್ಯ ಎಸೆದು ಯಾರೂ ನೋಡಿಲ್ಲವೆಂದು ಭಾವಿಸಿಕೊಂಡು ತೆರಳಿದ ಪ್ರವಾಸಿಗರ ಬೆನ್ನುಹಿಡಿದು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಅವರಿಂದ ದಂಡ ವಸೂಲಿ ಮಾಡಿ ಜಾಗೃತಿ ಮೂಡಿಸಿದ ಘಟನೆ ಸುಬ್ರಹ್ಮಣ್ಯದಲ್ಲಿ ಗುರುವಾರ ನಡೆದಿದೆ.
ಕುಕ್ಕೆಗೆ ಬಂದಿದ್ದ ಯಾತ್ರಿಕರು ಅ.23ರಂದು ಬೆಳಿಗ್ಗೆ ಕಾರಿನಲ್ಲಿ ಮರಳಿ ಹೋಗುವಾಗ ತ್ಯಾಜ್ಯದ ಕಟ್ಟೊಂದನ್ನು ನದಿಗೆ ಎಸೆದು ಹೋಗಿದ್ದರು. ಇದನ್ನು ಗಮನಿಸುತ್ತಿದ್ದ ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಪಂಚಾಯತ್‌ಗೆ ದೂರು ನೀಡಿದ್ದರು. ಪಂಚಾಯತ್‌ ಅಧಿಕಾರಿಗಳು ವೀಡಿಯೋವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಅವರು ನೋಂದಣಿ ಸಂಖ್ಯೆಯ ಆಧಾರದಲ್ಲಿ ವಾಹನದ ವಾರಸುದಾರರನ್ನು ಪತ್ತೆಹಚ್ಚಿದರು.
ವಾಹನವು ಮುರಳಿ ಎಂಬವರಿಗೆ ಸೇರಿದ್ದಾಗಿದ್ದು, ಅವರನ್ನು ಸಂಪರ್ಕಿಸಿದ ಪಂಚಾಯತ್‌ ಅಧಿಕಾರಿಗಳು ತ್ಯಾಜ್ಯ ಎಸೆದಿರುವುದಕ್ಕೆ ರೂ.2,000/- ದಂಡ ಪಾವತಿಸಲು ಸೂಚಿಸಿದ್ದು, ಬಳಿಕ ಅವರು ಆನ್‌ಲೈನ್‌ ಮೂಲಕ ದಂಡ ಪಾವತಿ ಮಾಡಿದ್ದಾರೆ ಎಂದು ಪಂಚಾಯತ್‌ ಮೂಲಗಳು ತಿಳಿಸಿವೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading