Ad Widget

ಕುಲ್ಕುಂದ : ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಾಳೆಯಿಂದ(ಅ.22) ಕಾರ್ತಿಕ ದೀಪೋತ್ಸವ, ಅತಿರುದ್ರ ಪುರಶ್ಚರಣೆ ಹಾಗೂ ಶ್ರೀ ರುದ್ರ ಮಹಾಯಾಗ ಆರಂಭ

ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಾಳೆಯಿಂದ(ಅ.22) ನ.20 ರವರೆಗೆ “ಕಾರ್ತಿಕ ದೀಪೋತ್ಸವ” ಹಾಗೂ ವಿಶೇಷವಾಗಿ “ಅತಿರುದ್ರ ಪುರಶ್ಚರಣೆ” ನಡೆಯಲಿದ್ದು, ನ.17 ರಂದು “ಶ್ರೀ ರುದ್ರ ಮಹಾಯಾಗ” ಹಾಗೂ ಪ್ರತಿನಿತ್ಯ ಬೆಳಿಗ್ಗೆ ವಿವಿಧ ವೈದಿಕ ತಂಡಗಳಿಂದ “ರುದ್ರಾನುಷ್ಠಾನ” ಹಾಗೂ ಸಂಜೆ ವಿವಿಧ ಭಜನಾ ತಂಡಗಳಿಂದ “ಭಜನಾ ಸೇವೆ” ನಡೆಯಲಿದ್ದು, ಅ.22 ಬುಧವಾರದಿಂದ ನ.20 ಗುರುವಾರದವರೆಗೆ ನಿರಂತರವಾಗಿ ಬೆಳಿಗ್ಗೆ 9:00 ಗಂಟೆಯಿಂದ ಶಿವ ಪಂಚಾಕ್ಷರಿ ಹವನ, ಬೆಳಿಗ್ಗೆ 9:30 ರಿಂದ ರುದ್ರಾನುಷ್ಠಾನ, ಬೆಳಿಗ್ಗೆ 11:30 ರಿಂದ ಶ್ರೀ ದೇವರಿಗೆ ಮಹಾಭಿಷೇಕ, ಮದ್ಯಾಹ್ನ 12:30 ರಿಂದ ಮಹಾಪೂಜೆ, ಮದ್ಯಾಹ್ನ 12:45 ರಿಂದ ಅನ್ನಪ್ರಸಾದ, ಸಂಜೆ 6:00 ಗಂಟೆಯಿಂದ ಭಜನಾ ಸೇವೆ, ರಾತ್ರಿ 7:00 ಗಂಟೆಗೆ ಕಾರ್ತಿಕ ದೀಪಾರಾಧನೆ, ರಾತ್ರಿ 7:30ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಅ.22 ಬುಧವಾರದಂದು ಬೆಳಿಗ್ಗೆ 7:30 ರಿಂದ ಮ‌ಹಾಸಂಕಲ್ಪ, ಮಹಾನ್ಯಾಸ ಪೂರ್ವಕ ಹಾಗೂ ರುದ್ರಾನುಷ್ಠಾನ ಪ್ರಾರಂಭವಾಗಲಿದ್ದು, ನ.16 ರವಿವಾರದಂದು ಬೆಳಿಗ್ಗೆ 8:30 ರಿಂದ ಅಷ್ಟದ್ರವ್ಯ ಗಣಪತಿ ಹವನ, ಗಣಪತಿ ಅಥರ್ವಶೀರ್ಷ ಹವನ ಹಾಗೂ ಸಂಜೆ 6:00 ಗಂಟೆಯಿಂದ ಶ್ರೀ ಭಗವತಿ ಸೇವೆ ನಡೆಯಲಿದೆ.
ನ.17 ಸೋಮವಾರದಂದು ಬೆಳಿಗ್ಗೆ 8:00 ರಿಂದ ಶ್ರೀರುದ್ರ ಮಹಾಯಾಗ, ಬೆಳಿಗ್ಗೆ 11:30 ರಿಂದ ಪೂರ್ಣಾಹುತಿ, ಮದ್ಯಾಹ್ನ 12:00 ಗಂಟೆಗೆ ದೇವರಿಗೆ ಕಲಶಾಭಿಷೇಕ ಹಾಗೂ ಮಧ್ಯಾಹ್ನ 12:30ಕ್ಕೆ ಮಹಾಪೂಜೆ ನೆರವೇರಲಿದ್ದು, ಈ ಪುಣ್ಯತಮ ಕಾರ್ಯಗಳಲ್ಲಿ ಭಕ್ತಾದಿಗಳು ಆಗಮಿಸಿ ಶ್ರೀ ಸನ್ನಿಧಿಯಲ್ಲಿ ನಡೆಯುವ ಪೂಜಾ ಉತ್ಸವದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading