Ad Widget

ಕುಕ್ಕೆಯಲ್ಲಿ ದೀಪಾವಳಿಯ ಧನ ತ್ರಯೋದಶಿಯಂದು ಭಕ್ತರ ದಟ್ಟಣೆ

ಸುಬ್ರಹ್ಮಣ್ಯ ಅಕ್ಟೋಬರ್ 19 : ಈ ವರ್ಷದ ದೀಪಾವಳಿಯ ಆರಂಭದ ಧನ ತ್ರಯೋದಶಿ ದಿನದಂದು ಕುಕ್ಕೆಯಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಬಂದು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಶ್ರೀ ದೇವಳದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಭಕ್ತರ ದಟ್ಟಣೆ ಕಂಡು ಬಂತು. ಹಾಗೆ ನಾಗ ಪ್ರತಿಷ್ಠಾ ಮಂಟಪದ ಮುಂಭಾಗದಲ್ಲಿ ಕೂಡ ನಾಗ ಪ್ರತಿಷ್ಠೆ ಸೇವೆಗಾಗಿ ಭಕ್ತಾದಿಗಳು ಕಾದು ಕುಳಿತಿದ್ದರು.
ಮಧ್ಯಾಹ್ನದ ಮಹಾಪೂಜೆ ಗಾಗಿ ಬೆಳಿಗ್ಗೆ ಗಂಟೆ 11:30 ರಿಂದಲೇ ಶ್ರೀ ದೇವಳದ ಒಳಾಂಗಣ ಪ್ರವೇಶ ನಿಶಿದ್ಧವಾದರಿಂದ ಹನ್ನೆರಡು ಗಂಟೆಯ ಮಹಾಪೂಜೆ ಕಳೆದು 12.20ರಿಂದ ಭಕ್ತಾದಿಗಳನ್ನ ಶ್ರೀ ದೇವರ ದರ್ಶನಕ್ಕೆ ಬಿಡಲಾಯಿತು. ರವಿವಾರವಾದ್ದರಿಂದ ಎಂದಿನಂತೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿಯೇ ಈ ಕ್ಷೇತ್ರಕ್ಕೆ ಆಗಮಿಸಿದ್ದರು. ಎಲ್ಲಾ ವಾಹನ ಪಾರ್ಕಿಂಗ್ ಸ್ಥಳಗಳು ಬರ್ತೀಯಾಗಿದ್ದವು. ಶ್ರೀ ದೇವಳದ ವತಿಯಿಂದ ಅನ್ನಪ್ರಸಾದ ಭೋಜನವನ್ನು ಗಂಟೆ  11:30ರಿಂದ ಪ್ರಾರಂಭಿಸಲಾಗಿತ್ತು.
ಶ್ರೀ ದೇವಳದ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹೋಂ ಗಾರ್ಡ್ಸ್ ಭಕ್ತರ ಸೇವೆಗಾಗಿ ಶ್ರಮಿಸುತ್ತಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading