Ad Widget

ಮಡಪ್ಪಾಡಿ : ಯುವಕ ಮಂಡಲದ ವತಿಯಿಂದ “ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025”

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಯುವಕ ಮಂಡಲ(ರಿ.) ಮಡಪ್ಪಾಡಿ ಇವುಗಳ ಸಂಯುಕ್ತಾಶ್ರಯದಲ್ಲಿ “ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025” (75 ದಿನಗಳ ಸ್ವಚ್ಛತಾ ಅಭಿಯಾನ) ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಮೂರನೇ  ಸ್ವಚ್ಛತಾ ಕಾರ್ಯಕ್ರಮವನ್ನು ದಿನಾಂಕ ಅ.18 ಶನಿವಾರದಂದು ಪೂ. 7.00 ಗಂಟೆಗೆ ಸರಿಯಾಗಿ ಮಡಪ್ಪಾಡಿ ಅಂಗನವಾಡಿ ಕೇಂದ್ರದ ಹತ್ತಿರ ಸ್ವಚ್ಛತೆ ನಡೆಸಿ,ಹಣ್ಣಿನ ಗಿಡ ನೆಡುವುದರ ಮೂಲಕ ಮಾಡಲಾಯಿತು.
ಈ ಸಂದರ್ಭದಲ್ಲಿ ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷರಾದ ಕಿರಣ್ ಶೀರಡ್ಕ, ಪೂರ್ವಾಧ್ಯಕ್ಷರಾದ ಧನ್ಯಕುಮಾರ್ ದೇರುಮಜಲು, ಸದಸ್ಯರಾದ ರಂಜಿತ್ ಬೊಮ್ಮೆಟ್ಟಿ, ವಿನ್ಯಾಸ್ ಪಾರೆಮಜಲು, ಪ್ರೇಕ್ಷಿತ್ ಬೊಮ್ಮೆಟ್ಟಿ, ಮಡಪ್ಪಾಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸದಾನಂದ ಬಲ್ಕಜೆ, ಸದಸ್ಯರಾದ ರಾಜಶೇಖರ ದೇರುಮಜಲು, ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕರಾದ ಲೋಹಿತ್ ಬಾಳಿಕಳ ಹಾಗೂ ಯುವಕ ಮಂಡಲದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading