Ad Widget

ನಿಮಗೆ ಎಪಿಕೆ ಫೈಲ್ ಬಂದರೇ ಎಚ್ಚರ ಎಚ್ಚರ – ಎಸ್.ಬಿ.ಐ. ಬ್ಯಾಂಕ್ ಹೆಸರಲ್ಲಿ ವಂಚನೆಗೆ ನಿರಂತರ ಯತ್ನಿಸುತ್ತಿರುವ ಹ್ಯಾಕರ್ – ಎಪಿಕೆ ಫೈಲ್ ಕಳುಹಿಸಿ ನಂಬರ್, ವಾಟ್ಸಾಪ್ ಹ್ಯಾಕ್

ನಿಮಗೆ ಯಾವುದೇ ಕಂಪೆನಿ,ಬ್ಯಾಂಕ್ ಹೆಸರಿನಲ್ಲಿ ಎಪಿಕೆ ಫೈಲ್ ಬಂದರೇ ನೂರು ಬಾರಿ ಆಲೋಚಿಸಿ. ಇತ್ತೀಚೆಗೆ ಎಸ್.ಬಿ.ಐ. ಬ್ಯಾಂಕ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್ ಗಳು ನಿರಂತರ ವಂಚನೆಗೆ ಯತ್ನಿಸುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ.

. . . . . . . . .

ಮೊದಲಿಗೆ ನಿಮ್ಮ ಮೊಬೈಲ್ ಗೆ ಮೇಲೆ ಕಾಣಿಸಿದ ಎಪಿಕೆ ಫೈಲ್ ಕಳುಹಿಸಿಸುತ್ತಾರೆ. ಈ ಫೈಲನ್ನು ಓಪನ್ ಮಾಡಿದಾಗ ನಂಬರ್ ಹ್ಯಾಕ್ ಮಾಡುತ್ತಾರೆ. ನಿಮ್ಮ ಎಲ್ಲಾ ವಾಟ್ಸಾಪ್ ನಂಬರ್ ಗಳಿಗೆ ಅವರೇ APK file ಕಳುಹಿಸುತ್ತಾರೆ. ನಿಮ್ಮ ವಾಟ್ಸಾಪ್ ಡಿಪಿ ಬದಲಾವಣೆ , ನೀವು admin ಆಗಿರುವ ಗ್ರೂಪ್ ಗಳು ಅವರ ಕಂಟ್ರೋಲ್ ತರುತ್ತಾರೆ. ನಿಮ್ಮ ಎಲ್ಲಾ ಗ್ರೂಪ್ ಗಳಿಗೂ ಕಳುಹಿಸುತ್ತಾರೆ. ಈ ಮಧ್ಯದಲ್ಲಿ APK file ಓಪನ್ ಮಾಡಿದಾಗ ಆಧಾರ್ ನಂಬರ್ ಕೇಳುತ್ತದೆ. ಆ ಕೆಲಸ ಮಾಡಿದರೇ ನಿಮ್ಮ ಖಾತೆಯ ಹಣವೆಲ್ಲಾ ಹ್ಯಾಕರ್ ಗಳ ಪಾಲಾಗುತ್ತದೆ.

. . . . . . .

ಅರಂತೋಡಿನ ಗ್ರಾ.ಪಂ.ಪಿಡಿಓ ಅವರಿಗೆ ಬ್ಯಾಂಕ್ ನಿಂದ ಇ ಕೆವೈಸಿ ಮಾಡಲು ಅಧಿಕೃತ ಪತ್ರ ಬಂದಿತ್ತು. ಇದೇ ಸಂದರ್ಭ APK file ಬಂದಿದ್ದರಿಂದ ಫೈಲ್ ಓಪನ್ ಮಾಡಿದ್ದಾರೆ. ಇಂದು ಬೆಳಿಗ್ಗೆ ಅವರ ಹ್ಯಾಕ್ ಮಾಡಲಾಗಿದ್ದು ಪಂಚಾಯತ್ ಗ್ರೂಪನ್ನೇ ಹ್ಯಾಕರ್ ಗಳು ಬದಲಾಯಿಸಿದ್ದಾರೆ. ಅವರ ಸಂಪರ್ಕದಲ್ಲಿರುವ ಎಲ್ಲಾ ವಾಟ್ಸಾಪ್ ಗಳಿಗೆ APK file ಕಳುಹಿಸಿದ್ದಾರೆ. ಪಿಡಿಓ ಅವರೇ ಕಳುಹಿದ್ದಾರೆ ಎಂದು ಜನ ಭಾವಿಸಿ ಫೈಲ್ ಓಪನ್ ಮಾಡಿದ್ದರೇ ದೇವರೇ ಗತಿ. ಪಿಡಿಓ ಅವರು ಕೂಡಲೇ ಬ್ಯಾಂಕ್ ಖಾತೆಗಳನ್ನು ಬಂದ್ ಮಾಡಿದ್ದಾರೆ. ಅವರಿಗೆ ಹಣದ ವಂಚನೆಯಾಗಿಲ್ಲ ಎಂದು ತಿಳಿದುಬಂದಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading