Ad Widget

ಗುತ್ತಿಗಾರು : ಡಿಸಿಸಿ ಬ್ಯಾಂಕ್ ಸ್ಥಳಾಂತರಗೊಂಡು ಶುಭಾರಂಭ – ಎಟಿಎಂ ಉದ್ಘಾಟನೆ

ಡಿಸಿಸಿ ಬ್ಯಾಂಕ್ ನ ಗುತ್ತಿಗಾರು ಶಾಖೆಯು ಅ.13 ರಂದು ಸ್ಥಳಾಂತರಗೊಂಡು ಗುತ್ತಿಗಾರು ಪೇಟೆಯ ‘ರಾಘವೇಂದ್ರ ಕಾಂಪ್ಲೆಕ್ಸ್‌’ ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ದೀಪ ಪ್ರಜ್ವಲನೆ ಮಾಡಿ ಶಾಖೆ ಉದ್ಘಾಟಿಸಿದರು.
ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ವಿನಯಕುಮಾ‌ರ್ ಸೂರಿಂಜೆ  ಎ.ಟಿ.ಎಂ ಉದ್ಘಾಟಿಸಿದರು.
ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭದ್ರತಾ ಕೋಶ ಉದ್ಘಾಟಿಸಿದರು.
ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಮಿತ್ರ ಮೂಕಮಲೆ ಠೇವಣಿ ಪತ್ರ ಹಸ್ತಾಂತರಿಸಿದರು.
ಪ್ರಾ.ಕೃ. ಪ. ಸ.ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ ಲಾಕರ್ ಕೀ ಹಸ್ತಾಂತರಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ ಹೊಸ ಸ್ವ-ಸಹಾಯ ಸಂಘ ಉದ್ಘಾಟಿಸಿದರು.
ಕಾರ್ಯಕ್ರಮದಲ್ಕಿ ವಾಹನ ಸಾಲ ಪತ್ರ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕಟ್ಟಡ ಮಾಲಕ ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಗುತ್ತಿಗಾರು ಶಾಖಾ ವ್ಯವಸ್ಥಾಪಕ ಕುಶಾಲಪ್ಪ ಗೌಡ.ಯು ವೇದಿಕೆಯಲ್ಲಿದ್ದರು.
ಕಟ್ಟಡ ಮಾಲಕ ಅನಿಲ್ ಕುಮಾರ್ ದಂಪತಿಗಳನ್ನು ಗೌರವಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading