Ad Widget

ಐವರ್ನಾಡಿನಲ್ಲಿ 70 ನೇ ತಿಂಗಳ ಬೃಹತ್ ಸ್ವಚ್ಛತಾ ಕಾರ್ಯಕ್ರಮ

ನೂರಾರು ಜನ ಗ್ರಾಮಸ್ಥರು ಸ್ವಚ್ಛತೆಯಲ್ಲಿ ಭಾಗಿ

. . . . . . . . .

ಗೆಳೆಯರ ಬಳಗ ದೇರಾಜೆ ವತಿಯಿಂದ ಮ್ಯಾರಥಾನ್ ಸ್ಪರ್ಧೆ

. . . . . . .

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಪ್ರತೀ ತಿಂಗಳು ಸ್ವಚ್ಛತಾ ಕಾರ್ಯಕ್ರಮನಡೆಯುತ್ತಿದ್ದು.
ಇಂದಿಗೆ 70 ನೇ ತಿಂಗಳು (ನಿರಂತರ 7 ವರ್ಷಗಳ) ಸ್ವಚ್ಚತಾ ಅಭಿಯಾನ ಪೂರೈಸಿದೆ.

70 ನೇ ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಅ.05 ರಂದು ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಬೃಹತ್ ಸ್ವಚ್ಚತಾ ಕಾರ್ಯಕ್ರಮ ಐವರ್ನಾಡು ಗ್ರಾಮ ಪಂಚಾಯತ್ ವಠಾರದಲ್ಲಿ ಪ್ರಾರಂಭವಾಗಿ ಐವರ್ನಾಡು ಮುಖ್ಯ ಪೇಟೆಯಿಂದ ಬಾಂಜಿಕೋಡಿವರೆಗೆ ಹಾಗೂ ಐವರ್ನಾಡು ಗ್ರಾಮ ಪಂಚಾಯತ್ ಮುಖ್ಯ ಪೇಟೆಯಿಂದ ಪುತ್ತಿಲದವರೆಗೆ 2 ತಂಡಗಳಾಗಿ ಮುಖ್ಯ ರಸ್ತೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಈ ಸ್ವಚ್ಚತಾ ಕಾರ್ಯಕ್ರಮವು ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅ.02.2018 ರಂದು ಗಾಂಧಿ ಜಯಂತಿಯಂದು ಆರಂಭವಾಗಿ ಪ್ರತಿ ತಿಂಗಳು ಮೊದಲನೇ ಆದಿತ್ಯವಾರ ಪೂ.ಗಂಟೆ 7.00 ರಿಂದ 9.00 ರವರೆಗೆ ಕೋರೋನಾ ಲಾಕ್ ಡೌನ್ ಅವಧಿಯನ್ನು ಹೊರತುಪಡಿಸಿ ಇವತ್ತಿಗೆ ದಿನಾಂಕ 05/10/2025 ಕ್ಕೆ ನಿರಂತರ 7 ವರ್ಷಗಳಿಂದ ಅಂದರೆ 70 ತಿಂಗಳುಗಳ ಕಾಲ ಬೃಹತ್ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸುತ್ತಾ ಸುಳ್ಯ ತಾಲೂಕು ಐವರ್ನಾಡು ಗ್ರಾಮದಲ್ಲಿ ವ್ಯವಸ್ಥಿತವಾಗಿ ಘನತ್ಯಾಜ್ಯ ಘಟಕವನ್ನು ನಿರ್ವಹಿಸಿಕೊಂಡು ಐವರ್ನಾಡು ಗ್ರಾಮವನ್ನು ಸ್ವಚ್ಚ ಸುಂದರ ಗ್ರಾಮವನ್ನಾಗಿಸಲು ಐವರ್ನಾಡು ಗ್ರಾಮ ಪಂಚಾಯತ್ ಆಡಳಿತ ಮಂಡಳಿ, ಅಧಿಕಾರಿ,ಸಿಬ್ಬಂಧಿಗಳು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸರಕಾರಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂಧಿಗಳು ಹಾಗೂ ಊರ ಹಿರಿಯರು,ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳು ಸತತ ಪ್ರಯತ್ನ ಮಾಡುತ್ತಿದ್ದಾರೆ.
70 ನೇ ತಿಂಗಳಿನ ಸ್ವಚ್ಛತಾ ಕಾರ್ಯಕ್ರಮವನ್ನು ಹಿರಿಯರಾದ ಮಾಧವ ಭಟ್ ಶೃಂಗೇರಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಗೆಳೆಯರ ಬಳಗ ದೇರಾಜೆ ವತಿಯಂದ ಮ್ಯಾರಥಾನ್ ಸ್ಪರ್ಧೆ ನಡೆಯಿತು.
ಬಾಂಜಿಕೋಡಿಯಿಂದ ಪಂಚಾಯತ್ ವರೆಗೆ ನಡೆದ ಮ್ಯಾರಥಾನ್ ನಲ್ಲಿ ಹಲವು ಜನರು ಭಾಗವಹಿಸಿದ್ದರು.
ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading