Ad Widget

ಅಕ್ರಮ ಮದ್ಯ ಮಾರಾಟ ; ಆರೋಪಿ ದೋಷ ಮುಕ್ತ

Advertisement : Contact us for LIVE BROADCASTING of programs : Contact us for live broadcasting of various cultural, recruitment, fair, sports and meeting events. mob : 9449387044 | 9980085616

ತೊಡಿಕಾನದಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿ ದೋಷಮುಕ್ತಗೊಂಡ ಬಗ್ಗೆ ವರದಿಯಾಗಿದೆ.‌
ದಿನಾಂಕ 02/03/2023 ರಂದು ಅಡ್ಯಡ್ಕದ ಅಣ್ಣದೊರೈ ಎಂಬುವರು ಕಾನೂನು ಬಾಹಿರವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಪರವಾನಿಗೆ ಇಲ್ಲದೆ ಸುಳ್ಯ ತಾಲೂಕು ತೋಡಿಕಾನ ಗ್ರಾಮದ ಅಡ್ಯಡ್ಕದ ತನ್ನ ಮನೆಯ ಎದುರಿನ ಅಂಗಡಿಯ ಹಿಂಬದಿಯ ಬಳಿ  ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನಲೆಯಲ್ಲಿ ಆರೋಪಿ ಅಣ್ಣದೊರೈ ಎಂಬವರ ವಿರುದ್ಧ  ಕರ್ನಾಟಕ ಅಬಕಾರಿ ಕಾಯ್ದೆ ಕಲಂ 32, 34ರಂತೆ ಪ್ರಕರಣ ದಾಖಲಿಸಿ, ದೋಷರೋಪಣ ಪಟ್ಟಿಯನ್ನು ಸುಳ್ಯ ಪೊಲೀಸರು ಮಾನ್ಯ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಳ್ಯದ ಮಾನ್ಯ  ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಮೋಹನ್ ಬಾಬುರವರು “ಪ್ರಕರಣವನ್ನು ಸಾಬೀತು ಪಡಿಸಲು ಅಭಿಯೋಜನೆಯು ವಿಫಲಗೊಂಡಿದೆ” ಎಂದು ತೀರ್ಮಾನಿಸಿ ಆರೋಪಿಯನ್ನು ದೋಷಮುಕ್ತ ಗೊಳಿಸಿ ದಿನಾಂಕ : 27/09/2025 ರಂದು ತೀರ್ಪು ನೀಡಿರುತ್ತಾರೆ.‌
ಆರೋಪಿ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ.ವಿ ಗೌಡ, ರಾಜೇಶ್ ಬಿ.ಜಿ ಹಾಗೂ ಶ್ಯಾಮ್ ಪ್ರಸಾದ್ ಎನ್.ಕೆ ರವರು ವಾದಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading