Ad Widget

ಸುಳ್ಯ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇಂದೂ ಕೂಡ ಸರ್ವರ್ ಪ್ರಾಬ್ಲಂ –  ಓಟಿಪಿ ಬಾರದೆ ಸಾರ್ವಜನಿಕರು ಹಾಗೂ ಸಮೀಕ್ಷೆದಾರರ ಪರದಾಟ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಸುಳ್ಯದ ವಿವಿಧೆಡೆ ಇಂದು ಕೂಡ ಸರ್ವರ್ ಸಮಸ್ಯೆಯಿಂದ ಸಮೀಕ್ಷೆದಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು.
ಸರ್ವರ್ ಸಮಸ್ಯೆಯಿಂದ ಇಂದು ಓಟಿಪಿ ಸಿಗದೆ ಸಮೀಕ್ಷೆಗೆ ತೀವ್ರ ಹಿನ್ನಡೆಯಾಯಿತು. ಸಮೀಕ್ಷೆದಾರರಿಗೆ ಮೇಲಾಧಿಕಾರಿಗಳು ದಿನಕ್ಕೆ 100 ಸಮೀಕ್ಷೆಯಂತೆ ಗುರಿ ನೀಡಲಾಗಿದ್ದು, ಸಮೀಕ್ಷೆದಾರರು ತೀವ್ರ ಒತ್ತಡದೊಂದಿಗೆ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ತಾಂತ್ರಿಕ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading