Ad Widget

ಸುಳ್ಯ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ವಿವಿಧೆಡೆ ಸರ್ವರ್ ಪ್ರಾಬ್ಲಂ – ಸಾರ್ವಜನಿಕರು ಹಾಗೂ ಸಮೀಕ್ಷೆದಾರರ ಪರದಾಟ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 7ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸುಳ್ಯದ ವಿವಿಧೆಡೆ ಸರ್ವರ್ ಸಮಸ್ಯೆಯಿಂದ ಸಮೀಕ್ಷೆದಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಈಗಾಗಲೇ ಶಿಕ್ಷಕರು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದು, ತಾಂತ್ರಿಕ ಕಾರಣಗಳಿಂದ ಆ್ಯಪ್ ಕಾರ್ಯನಿರ್ವಹಿಸದೆ ಪ್ರತಿದಿನದ ಸಮೀಕ್ಷೆ ಕುಂಠಿತವಾಗುತ್ತಿದೆ.

. . . . . . . . .

ಇಂದಿನಿಂದ ಗ್ರಾಮ ಪಂಚಾಯಿತಿಗಳ ಮೂಲಕವೂ ಸಮೀಕ್ಷೆ ನಡೆಯುತ್ತಿದ್ದು, ಸಾರ್ವಜನಿಕರಿಗೆ ಮೊಬೈಲ್ ಬಳಸಿ ಸ್ವಯಂ ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸರ್ವರ್ ಸಮಸ್ಯೆಯಿಂದ ಮೊಬೈಲ್ ಮೂಲಕ ಸಮೀಕ್ಷೆ ನಡೆಸುವವರಿಗೆ ಪೋಟೋ ಅಪ್ಲೋಡ್ ಆಗದೆ ಸಮಸ್ಯೆ ಉಂಟಾಯಿತು. ಇದಲ್ಲದೆ ನೆಟ್‌ವರ್ಕ್ ಸಮಸ್ಯೆಯಿಂದ ಓಟಿಪಿ ಸಿಗದೆ ಸಮೀಕ್ಷೆಗೆ ತೊಡಕುಂಟಾಗುತ್ತಿದೆ. ಅಪ್ ಲೋಡ್ ವಿಳಂಬವಾಗುವುದರಿಂದ ಮನೆಯವರು ಬೇರೆ ಕೆಲಸ ಬಿಟ್ಟು ಕಾಯುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading