Ad Widget

ಸೆ.28 : ಮೂರ್ತೆದಾರರ ಸೇವಾ ಸಹಕಾರ ಸಂಘದ ಆಲಂಕಾರು ಇದರ ಬೆಳ್ಳಾರೆ ಶಾಖೆ ಉದ್ಘಾಟನೆ

ಮೂರ್ತೇದಾರರ ಸೇವಾ ಸಹಕಾರ ಸಂಘ  ನಿಯಮಿತ ಆಲಂಕಾರು ಕಡಬ ತಾಲೂಕು ಇದರ ಬ್ಯಾಂಕಿಂಗ್ ವ್ಯವಹಾರದ ನೂತನ 5ನೇ ಶಾಖೆ ಬೆಳ್ಳಾರೆಯ ದೇವಿ ಹೈಟ್ಸ್ನಲ್ಲಿ ನಾಳೆ(ಸೆ 28) ಉದ್ಘಾಟನೆಗೊಳ್ಳಲಿದೆ.
ಪೂ 7:30ಕ್ಕೆ ಮಹಾಗಣಪತಿ ಹೋಮ ಮತ್ತು ಲಕ್ಷ್ಮೀ ಪೂಜೆ, ಮಂಗಳಾರತಿ ಆಗಲಿದೆ.
ಪೂ:10 ಘಂಟೆಗೆ ಬೆಳ್ಳಾರೆ ದೇವಿ ಹೈಟ್ಸ್ನ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಭಾಧ್ಯಕ್ಷತೆಯನ್ನು ಮೂರ್ತೇದಾರರ ಸೇವಾ ಸಹಕಾರ ಸಂಘ(ರಿ.)ಆಲಂಕಾರು ಇದರ ಅಧ್ಯಕ್ಷರಾದ ಶ್ರೀ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ ವಹಿಸಲಿದ್ದಾರೆ.
ಶಾಖೆಯ ಭದ್ರತಾ ಕೋಶವನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಲಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು ಭಾಗೀರಥಿ ಮುರುಳ್ಯ ಗಣಕಯಂತ್ರ ಉದ್ಘಾಟನೆ ಮಾಡಲಿದ್ದಾರೆ.
ಕರ್ನಾಟಕ ಸರಕಾರದ ಮಾಜಿ ನಗರಾಭಿವೃದ್ಧಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆಯವರು ನೂತನ ಶಾಖಾ ಕಛೇರಿಯನ್ನು ಉದ್ಘಾಟಿಸಲಿದ್ದಾರೆ.
ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಹರೀಶ್ ಕುಮಾರ್ ವರು ನೂತನ ಕಛೇರಿಯಲ್ಲಿ ದೀಪೋಜ್ವಲನ ಗೈಯ್ಯಲಿದ್ದಾರೆ.
ನಿರಖು ಠೇವಣಿ ಪತ್ರ ಬಿಡುಗಡೆಯನ್ನು ದ.ಕ ಜಿಲ್ಲಾ ಮೂರ್ತೇದಾರರ ಸಹಕಾರಿ ಮಹಾಮಂಡಲ(ನಿ.)ಬಿ.ಸಿ ರೋಡ್ ಅಧ್ಯಕ್ಷರಾದ ಶ್ರೀ ಸಂಜೀವ ಪೂಜಾರಿಯವರು ಮಾಡಲಿದ್ದಾರೆ.
ಸಭಾ ಕಾರ್ಯಕ್ರಮ ಉದ್ಘಾಟನೆಯನ್ನು ಗುರುದೇವ ಪದವಿಪೂರ್ವ ಕಾಲೇಜು ಬೆಳ್ತಂಗಡಿ ಇದರ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ಪ ಪೂಜಾರಿಯವರು ನೆರವೇರಿಸಲಿದ್ದಾರೆ.
ಉಳಿತಾಯ ಖಾತೆ ಪುಸ್ತಕ ಬಿಡುಗಡೆಯನ್ನು ದಕ್ಷಿಣ ಕನ್ನಡ ಜಿಲ್ಲೆ ಸಹಕಾರ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ರಮೇಶ್ ಹೆಚ್.ಎನ್ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ನಮಿತಾ ಎಲ್ ರೈ,ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಆರ್. ಕೆ ಭಟ್ ಕುರುಂಬುಡೇಲು, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ವಿಜಯಕುಮಾರ್ ಸೊರಕೆ,ಸುಳ್ಯದ ಮಾಜಿ ಉಪತಹಸೀಲ್ದಾರರು, ಸುಳ್ಯದ ಬಿಲ್ಲವ ಸಂಘದ ಸ್ಥಾಪಕಾಧ್ಯಕ್ಷರಾದ ಶ್ರೀ ಎಂ.ಜನಾರ್ಧನ ಅಲೆಕ್ಕಾಡಿ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಕೆಡೆಂಜಿ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಝಕರಿಯಾ ಜುಮುಅ: ಮಸೀದಿ ಬೆಳ್ಳಾರೆ ಇದರ ಅಧ್ಯಕ್ಷರಾದ ಶ್ರೀ ಯು.ಹೆಚ್ ಅಬೂಬಖರ್, ಶ್ರೀ ದೇವಿ ಹೈಟ್ಸ್ ಕಟ್ಟಡ ಮಾಲಕರಾದ ರೋ.ಶ್ರೀ ನವೀನ್ ಕುಮಾರ್ ರೈ ತಂಬಿನಮಕ್ಕಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ನೆರವಾಗಲಿದ್ದಾರೆ.
ಗೌರವ ಉಪಸ್ಥಿತರಾಗಿ ಬೆಳ್ಳಾರೆ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಜಗನ್ನಾಥ ಪೂಜಾರಿ ಮುಕ್ಕೂರು,ಮೂರ್ತೇದಾರರ ಸೇವಾ ಸಹಕಾರ ಸಂಘ ನಿ.ಆಲಂಕಾರು ಮಾಜಿ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ ಕರ್ಕೇರ ಮತ್ರಾಡಿ, ಯುವವಾಹಿನಿ(ರಿ)ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಹರೀಶ್ ಉಪ್ಪಂಗಳ, ವರ್ತಕರ ಸಂಘ ಬೆಳ್ಳಾರೆ ಅಧ್ಯಕ್ಷರಾದ ಶ್ರೀ ರಾಜೇಶ್ ಶ್ಯಾನ್ಭೋಗ್ ಮಣಿಕ್ಕರ, ಬೆಳ್ಳಾರೆ ಮೇಲಿನ ಪೇಟೆ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ಕುಮಾರ್ ಪೆರುವಾಜೆ, ಬೆಳ್ಳಾರೆ ಕೆಳಗಿನ ಪೇಟೆ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಪಿ.ಪಾಲ್ಗೊಳ್ಳಲಿದ್ದಾರೆ.

ವರದಿ:ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading