Ad Widget

ಹರಿಹರ ಪಳ್ಳತ್ತಡ್ಕ : ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನ ಸಹಯೋಗದೊಂದಿಗೆ ಸೆ.25 ರಂದು ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಿಹರ ಹಾಗೂ ಬಾಳುಗೋಡು ಗ್ರಾಮದ “ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ” ನಡೆಯಿತು.
ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ ದೀಪ ಬೆಳಗಿಸುವುದರೊಂದಿಗೆ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಬಾಳುಗೋಡು, ಅಭಿವೃದ್ಧಿ ಅಧಿಕಾರಿಗಳಾದ ಶ್ಯಾಮ್ ಪ್ರಸಾದ್, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ಗುತ್ತಿಗಾರು ಪಶುವೈದ್ಯರಾದ ಡಾ| ವೆಂಕಟಾಚಲಪತಿ ಉಪಸ್ಥಿತರಿದ್ದರು.
ಲಸಿಕಾ ಶಿಬಿರವು ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ವಠಾರ, ಉಪ್ಪುಕಳ ಕೃಷ್ಣ(ಭಗವಾನ್)ರ ಮನೆಯ ಬಳಿ, ಕೊತ್ನಡ್ಕ ಅಂಗನವಾಡಿ ಬಳಿ, ಮಾನಡ್ಕ ಗೋಪಾಲ ಮಾಸ್ತರ್ ರವರ ಮನೆಯ ಬಳಿ, ಮುಂಡೋಕಜೆ ಅಪ್ಪಯ್ಯ ರವರ ಮನೆಯ ಬಳಿ, ಪನ್ನೆ ಲಕ್ಷ್ಮಣ ರವರ ಮನೆಯ ಬಳಿ, ಪದಕ ಬಸ್ಸು ತಂಗುದಾಣದ ಬಳಿ, ಬೆಟ್ಟುಮಖಿ ಮೈದಾನದ ಬಳಿ, ಹರಿಹರ ದೇವಸ್ಥಾನದ ಬಸ್ಸು ತಂಗುದಾಣದ ಬಳಿ, ಕಲ್ಲೇಮಠ ಗ್ರಂಥಾಲಯದ ಬಳಿ, ರೇಗನ್ ಶೆಟ್ಟಿಯಡ್ಕ ರವರ ಮನೆಯ ಬಳಿ, ಕಜ್ಜೋಡಿ ಬಸ್ಸು ತಂಗುದಾಣದ ಬಳಿ ಹಾಗೂ ಮಲ್ಲಾರ ಬಸ್ಸು ತಂಗುದಾಣದ ಬಳಿ ನಡೆಯಿತು.
ಗುತ್ತಿಗಾರು ಡಿ ದರ್ಜೆ ನೌಕರರಾದ ಮೋಕ್ಷಿತ್, ನಂದನ್ ಹಾಗೂ ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಶುಸಖಿ ಅನಿತಾ ಮತ್ತು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಶುಸಖಿ ತಾರಾ ಸಹಕರಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading