Ad Widget

ಕೊಲ್ಲಮೊಗ್ರು : ಗ್ರಾಮ ಪಂಚಾಯತ್ ನಲ್ಲಿ ನಡೆದ ಅವ್ಯವಹಾರವನ್ನು ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ – ರಾಜಿನಾಮೆ ನೀಡಿದ ಗ್ರಾಮ ಪಂಚಾಯತ್ ಸದಸ್ಯರು – ಪೀಠೋಪಕರಣ ಕಳವು ಹಾಗೂ ಸಿಸಿ ಕ್ಯಾಮಾರ ದುರ್ಬಳಕೆ ಬಗ್ಗೆ ಕ್ರಮಕ್ಕೆ ಪೋಲೀಸ್ ದೂರು ನೀಡಿದ ಪಿಡಿಓ ಮತ್ತು ಅಧ್ಯಕ್ಷರು

ಭ್ರಷ್ಟಾಚಾರ ವಿರೋಧಿಸಿ ಕೆಲವು ದಿನಗಳ ಹಿಂದೆ ಪ್ರತಿಭಟನೆ ಸಾಕ್ಷಿಯಾಗಿದ್ದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವಠಾರದಲ್ಲಿ ಇಂದು ಮತ್ತೆ ಎರಡನೇ ಹಂತದ ಪ್ರತಿಭಟನೆ ನಡೆದಿದೆ.‌
ಭ್ರಷ್ಟಾಚಾರದ ವಿರುದ್ಧದ ಕೂಗಿನೊಂದಿಗೆ ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳ ಜನರು ಒಗ್ಗಟ್ಟಾಗಿ ರೂಪುಗೊಳಿಸಿದ “ನ್ಯಾಯಕ್ಕಾಗಿ ಹೋರಾಡೋಣ” ಸಮಿತಿಯ ವತಿಯಿಂದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಮುಂಭಾಗ ಸೆ.25 ರಂದು ಬೃಹತ್ ಪ್ರತಿಭಟನೆ ನಡೆಯಿತು.

. . . . . . . . .

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಿಬ್ಬಂದಿಯ ಮೇಲಿನ ಕಳವು ಆರೋಪದ ಬಗ್ಗೆ ಪೋಲೀಸ್ ದೂರು ನೀಡದೇ, ಸೂಕ್ತ ತನಿಖೆಯನ್ನೂ ನಡೆಸದೇ ಗ್ರಾಮ ಪಂಚಾಯತ್ ಆಡಳಿತ ತಪ್ಪು ಎಸಗಿರುವ ಬಗ್ಗೆ ಹಾಗೂ ಗ್ರಾಮ ಪಂಚಾಯತ್ ಕೊಲ್ಲಮೊಗ್ರು ಪೇಟೆಯ ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿ ಸಾರ್ವಜನಿಕರ ಗೌಪ್ಯತೆಗೆ ದಕ್ಕೆ ತಂದಿರುವ ಬಗ್ಗೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

. . . . . . .

ಪಂಚಾಯತ್ ಪೀಠೋಪಕರಣಗಳನ್ನು ಮನೆಗೆ ತೆಗೆದುಕೊಂಡ ಸಿಬ್ಬಂದಿ ಸಂತೋಷ್ ಗಡಿಕಲ್ಲು ಹಾಗೂ ಸಾರ್ವಜನಿಕ ಸಿಸಿ ಕ್ಯಾಮರಾವನ್ನು ದುರ್ಬಳಕೆ ಮಾಡಿದ ಗ್ರಾ.ಪಂ.ಉಪಾಧ್ಯಕ್ಷ ಮಾಧವ ಕೆ. ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಗ್ರಾಮ ಪಂಚಾಯತ್ ಸದಸ್ಯರಾದ ಜಯಶ್ರೀ ಚಾಂತಳ ಹಾಗೂ ಅಶ್ವತ್ ಯಳದಾಳು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದರು.‌

ಕೊನೆಗೆ ಅಧ್ಯಕ್ಷರು ಹಾಗೂ ಪಿಡಿಓ ಅವರು ಪಂಚಾಯತ್ ನಿಂದ ಕಳವಾದ ವಸ್ತುಗಳ ಬಗ್ಗೆ ಹಾಗೂ ಪೇಟೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾವನ್ನು ದುರ್ಬಳಕೆ ಮಾಡಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೋಲೀಸರಿಗೆ ದೂರು ನೀಡುವುದೆಂದು ತೀರ್ಮಾನಿಸಿದರು. ಇದರಂತೆ ಪಿಡಿಓ, ಅಧ್ಯಕ್ಷರು ಹಾಗೂ ಪ್ರತಿಭಟನಾ ನಿರತ ಪ್ರಮುಖರು ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ತೆರಳಿ ದೂರು ನೀಡಿದರು.

ಪ್ರತಿಭಟನೆಯಲ್ಲಿ ನ್ಯಾಯವಾದಿ ಪ್ರದೀಪ್ ಕುಮಾರ್ ಕೆ.ಎಲ್ ಉದಯ ಶಿವಾಲ,ಹರಿಪ್ರಸಾದ್ ಮಲ್ಲಾಜೆ, ಸುಧಾಮಣಿ, ಪ್ರಶಾಂತ್ ಆಲ್ಕಬೆ, ಸತೀಶ್ ಟಿ.ಎನ್, ವೀಣಾನಂದ ಬಿಳಿಮಲೆ, ಹರೀಶ್ ಬಳ್ಳಡ್ಕ, ಪ್ರಶಾಂತ್ ಚಾಳೆಪ್ಪಾಡಿ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading