Ad Widget

ಕೇರಳದಲ್ಲಿ ಕೊಲೆ ನಡೆಸಿದ ಆರೋಪಿಗಳನ್ನು ಕಲ್ಲುಗುಂಡಿಯಲ್ಲಿ ವಶಕ್ಕೆ ಪಡೆಯಲು ಯತ್ನ – ಕೇರಳ ಪೋಲೀಸರ ಕಣ್ತಪ್ಪಿಸಿ ಕಾಡಿನಲ್ಲಿ ಪರಾರಿಯಾದ ಆರೋಪಿಗಳು

. . . . . . . . .

ಕೇರಳದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳು ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿರುವ ಮಾಹಿತಿ ಮೇರೆಗೆ ಕಲ್ಲುಗುಂಡಿ ಹೊರಠಾಣೆಯ ಬಳಿ ಕೇರಳ ಪೋಲೀಸರು ಕಾದು ಕುಳಿತಿದ್ದರು. ಅವರನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಕ್ಷಣಮಾತ್ರದಲ್ಲಿ ತಪ್ಪಿಸಿಕೊಂಡ ಪರಾರಿಯಾದ ಘಟನೆ ಕಲ್ಲುಗುಂಡಿಯಿಂದ ಸೆ.17 ರಂದಯ ಸಂಜೆ ವರದಿಯಾಗಿದೆ.

. . . . . . .

ಕೇರಳದ ಪಾಲಕ್ಕಾಡ್ ನಲ್ಲಿ ಕೊಲೆ ನಡೆಸಿದ ಆರೋಪಿಗಳು ತಮ್ಮ ವಾಹನದ ಮೂಲಕ ಮಡಿಕೇರಿ ಕಡೆಯಿಂದ ಸುಳ್ಯಕಡೆಗೆ ಪ್ರಯಾಣಿಸುವ ಮಾಹಿತಿ ತಿಳಿದ ಕೇರಳ ಪೊಲೀಸರು ಅವರನ್ನು ಹಿಡಿಯುವುದಕ್ಕಾಗಿ ಕಲ್ಲುಗುಂಡಿ ಹೊರ ಠಾಣಾ ಬಳಿ ಕಾದು ಕುಳಿತಿದ್ದರು.

ಪೊಲೀಸರು ಇರುವ ವಿಷಯ ತಿಳಿದ ಆರೋಪಿ ಗಳು ಕಲ್ಲುಗುಂಡಿ ಪೆಟ್ರೋಲ್ ಪಂಪ್ ಬಳಿಯಿಂದ ಹಿಂತಿರುಗಿ ಮಡಿಕೇರಿ ಕಡೆಗೆ ಪರಾರಿಯಾದರು. ಆರೋಪಿಗಳು ದೇವರ ಕೊಲ್ಲಿ ಬಳಿ ಜೀಪನ್ನು ಬಿಟ್ಟು ಕಾಡಿನ ರಸ್ತೆಯಲ್ಲಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading