Ad Widget

ಪಳ್ಳಿಮಜಲು- ಮಹಬ್ಬಾಹ್ ಮೀಲಾದ್ ಫೆಸ್ಟ್ 2025

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ)ಮಸೀದಿ ವಠಾರದಲ್ಲಿ ಮಹಬ್ಬಾಹ್ ಮೀಲಾದ್ ಫೆಸ್ಟ್-2025 ಸೆ 13 ರಂದು ಸಂಜೆ ನಡೆಯಿತು.ಈ ಕಾರ್ಯಕ್ರಮವನ್ನು ಪಳ್ಳಿಮಜಲು ಸಿರಾಜುಲ್ ಹುದಾ ಸೆಖೆಂಡರಿ ಮದರಸದ ಮುಖ್ಯೋಪಾಧ್ಯಾಯರಾದ ಮಹಮೂದ್ ಸಖಾಫಿ ಉಸ್ತಾದರು ದು:ಆ ನಡೆಸುತ್ತಾ ಉದ್ಘಾಟಿಸಿದರು. ನಂತರ ಮೌಲೀದ್ ಪಾರಾಯಣವು ನಡೆಯಿತು.ಪಳ್ಳಿಮಜಲು ಮಸೀದಿ ಖತೀಬ್ ಮುಹಮ್ಮದ್ ರಫೀಖ್ ಬಾಹಸನಿ ಮೌಲೀದ್ಗೆ ನೇತೃತ್ವ ವಹಿಸಿದ್ದರು.

. . . . . . . . .

ವೇದಿಕೆಯಲ್ಲಿ ಸಿರಾಜುಲ್ ಇಸ್ಲಾಂ ಕಮಿಟಿ(ರಿ)ಪಳ್ಳಿಮಜಲು ಅಧ್ಯಕ್ಷ ಹನೀಫ್ ಸಲಾಲಹ್,ಇಲ್ಲಿನ ಮೀಲಾದ್ ಫೆಸ್ಟ್ -2025 ಪಳ್ಳಿಮಜಲು ಸ್ವಾಗತ ಸಮಿತಿ ಕೋಶಾಧಿಕಾರಿ ಇಬ್ರಾಹಿಂ ಎಂ.ಹೆಚ್., ಸ್ವಾಗತ ‌ಸಮಿತಿ ಖಜಾಂಜಿ ಮುಹಮ್ಮದ್ ಪಿ.ಹೆಚ್, ಸ್ವಲಾತ್ ಕಮಿಟಿ(ರಿ)ಪಳ್ಳಿಮಜಲು ಅಧ್ಯಕ್ಷ ಮೂಸಾ ಬೀಡು, ಮದರಸ ಮೇಲ್ನೋಟ ಸಮಿತಿ(ರಿ)ಪಳ್ಳಿಮಜಲು ಅಧ್ಯಕ್ಷ ಅಶ್ರಫ್ ಬೀಡು, ಪಳ್ಳಿಮಜಲು ಜಮಾತ್ ಗೆ ಸಂಬಂಧಪಟ್ಟವರಾದ ಅಬ್ದುಲ್ಲಾಹ್ ಕಾವಿನಮೂಲೆ ಉಪಸ್ಥಿತರಿದ್ದರು. ನಂತರ ವೇದಿಕೆಯಲ್ಲಿ ಸಿರಾಜುಲ್ ಹುದಾ ಸೆಖೆಂಡರಿ ಮದರಸ(ರಿ) ಪಳ್ಳಿಮಜಲಿನ ವಿದ್ಯಾರ್ಥಿಗಳಿಂದ ಧಾರ್ಮಿಕ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.ಇಲ್ಲಾಗ ಲಾಮಿಯ ತಂಡ ಪ್ರಥಮ ಸ್ಥಾನಿಯಾಯಿತು. ಆಲಿಯಾ ತಂಡ ದ್ವಿತೀಯ ಸ್ಥಾನ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ಪಳ್ಳಿಮಜಲು ಮಸೀದಿ ಖತೀಬ್ ಮುಹಮ್ಮದ್ ರಫೀಖ್ ಬಾಹಸನಿ ದು:ಆ ನೆರವೇರಿಸಿದರು. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ದ.ರಾ ಬೇಂದ್ರೆ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಖ್ಯಾತ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಬೆಳ್ಳಾರೆ ತಂಬಿನಮಕ್ಕಿ ದಾರುಲ್ ಹುದಾದ ನಾಸ್ವಿರ್ ಸುಖೈಫಿ,ಸ್ವಿದ್ದೀಖ್ ಹಿಮಮಿ,ಖಬೀರ್ ಹಿಮಮಿ, ಪಳ್ಳಿಮಜಲು ಮಸೀದಿಯ ಆಡಳಿತ ಕಮಿಟಿ ಅಧ್ಯಕ್ಷ ಹನೀಫ್ ಸಲಾಲಹ್, ಈ ಮಸೀದಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಬೀಡು,ಮಸೀದಿ ಕಮಿಟಿ ಪ್ರಧಾನ ಕಾರ್ಯದರ್ಶಿ ದಾವೂದ್ ಝಂ ಝಂ,ಕಮಿಟಿ ಸದಸ್ಯ ಸುಲೈಮಾನ್ ಬಂಡಿಮಜಲು,ಪಳ್ಳಿಮಜಲು ಮೀಲಾದ್ ಫೆಸ್ಟ್ -2025 ಸ್ವಾಗತ ಸಮಿತಿ ಚಯರ್ ಮೆನ್ ಅಶ್ರಫ್ ನೇಲ್ಯಮಜಲು, ಕಮಿಟಿ ಸದಸ್ಯರಾದ ಮುಹಮ್ಮದ್ ಪಿ.ಹೆಚ್,ಸ್ವಹುಫಿ ಬೀಡು,ಇತರ ವ್ಯಕ್ತಿಗಳಾದ ಇಸ್ಮಾಯಿಲ್ ಪಳ್ಳಿಬಳಿ ,ಅಬ್ದುಲ್ಲಾ ಜನಪ್ರಿಯ, ಇಬ್ರಾಹಿಂ ಮಾಸ್ತಿಕಟ್ಟೆ,ಹಾಗೂ ಸ್ವಿದ್ದೀಖ್ ಜನಪ್ರಿಯ ಉಪಸ್ಥಿತರಿದ್ದರು.
ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದ ನ್ಯಾಯಾಧೀಶರಾಗಿ ಶಮ್ಮಾಸ್ ಸಅದಿ ಪೆರುವಾಜೆ, ಮುಹಮ್ಮದ್ ಶಮೀರ್ ನಈಮಿ ಪೆರುವಾಜೆ ಸಹಕಾರದಲ್ಲಿದ್ದರು.

. . . . . . .


ನೌಶಾದ್ ಹಿಮಮಿ ಕರಿಂಬಿಲ ಕಾರ್ಯಕ್ರಮ ನಿರೂಪಿಸಿದರು. ಪ್ರೆಂಡ್ಸ್ ಸರ್ಕಲ್ ಪಳ್ಳಿಮಜಲು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶವಿತ್ತು. ಮೀಲಾದ್ ಫೆಸ್ಟ್ 2025 ಪಳ್ಳಿಮಜಲು ಸ್ವಾಗತ ಸಮಿತಿ ಕನ್ವಿನರ್ ಶಂಸುದ್ದೀನ್ ಝಂ ಝಂ ಸ್ವಾಗತಿಸಿ ಧನ್ಯವಾದಗೈದರು.ಕೊನೆಯಲ್ಲಿ ಸೀರಣಿ ವಿತರಣೆ ನಡೆಯಿತು.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading