Ad Widget

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ – ವಾರ್ಷಿಕ 118 ಕೋಟಿ ರೂ. ವ್ಯವಹಾರ ; 40,02,524 ರೂ. ಲಾಭಾಂಶ – ಶೇ.09 ಡಿವಿಡೆಂಡ್ ವಿತರಣೆ

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.14 ರಂದು ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಹೆಚ್.ಎಲ್ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್.ಕೆ.ಎಸ್ ರವರು ವಾರ್ಷಿಕ ವರದಿ ವಾಚಿಸುತ್ತಾ “ಸಂಘವು ವಾರ್ಷಿಕ 118 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, 40,02,524 ರೂಪಾಯಿ ಲಾಭಾಂಶ ಬಂದಿರುತ್ತದೆ. ಶೇ.09 ಡಿವಿಡೆಂಡ್ ಹಂಚುವುದಾಗಿ” ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದುಗ್ಗಪ್ಪ ನಾಯ್ಕ, ನಿರ್ದೇಶಕರುಗಳಾದ ರವೀಂದ್ರ ಕುಮಾರ್ ರುದ್ರಪಾದ, ಜಯಪ್ರಕಾಶ್ ಕೂಜುಗೋಡು, ಮೋಹನ್ ದಾಸ್ ರೈ, ಮಾಧವ.ಡಿ, ಶ್ರೀಮತಿ ಭಾರತಿ ದಿನೇಶ್, ಕಿರಣ್ ಪೈಲಾಜೆ, ಗಿರೀಶ್ ಆಚಾರ್ಯ ಪೈಲಾಜೆ, ಯಶೋಧ ಕೃಷ್ಣ ನೂಚಿಲ, ಸೋಮಶೇಖರ್ ಕಟ್ಟೆಮನೆ ಹಾಗೂ ಶ್ರೀಮತಿ ರಮ್ಯಾ ಪೈಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆದಿದ್ದು, ಸಂಘಕ್ಕೆ ಸಾಲ ಪಾವತಿಗಾಗಿ ಲಲಿತಾ ನೂಚಿಲ, ಪುಷ್ಪಾವತಿ.ಎನ್, ಪಿಗ್ಮಿ ಖಾತೆಗೆ ಹೆಚ್ಚು ಹಣ ಪಾವತಿಸಿದ್ದಕ್ಕಾಗಿ ಸುಬ್ರಹ್ಮಣ್ಯ ರಾವ್ ಹಾಗೂ ವೀರೇಶ್ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ನಂತರ ಸಂಘದ ಮಾಜಿ ನಿರ್ದೇಶಕರಾದ ಯಶೋಧಾ.ಕೆ.ಎನ್, ಪದ್ಮನಾಭ ಕೆದಿಲ, ಮಧುಸೂದನ್ ಕಾಪಿಕಾಡ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಪಿ.ಬಿ ಹರೀಶ್ ರೈ, ಇವರನ್ನು ಗೌರವಿಸಲಾಯಿತು.
ಹಾಗೆಯೇ ಸಂಘದ ಸದಸ್ಯರುಗಳ ಸಾಧಕ ಮಕ್ಕಳಾದ ದಿಶಾ, ಕಾರ್ತಿಕ್, ತೇಜಸ್, ಆಶ್ಲೇಷ್, ಕೃತಿಕಾ, ಚಿನ್ಮಯಿ.ಕೆ.ಎ, ಪ್ರೀತಿಕಾ.ಕೆ.ಆರ್, ಪಿಯೂಷಿಲಾಲ, ಪ್ರಸೂನ್ ಪಟೇಲ್ ಕೂಜುಗೋಡು, ಅಕ್ಷರಿ.ಆರ್.ಎಸ್, ವೇದಿಕಾ ಕೆದಿಲ, ಚೇತನಾ.ಕೆ.ಪಿ, ಆಜ್ಞಾ.ಐ ಹಾಗೂ ಬೆಳೆ ಸಮೀಕ್ಷೆ ಕಾರ್ಯವನ್ನು ನಡೆಸಿಕೊಟ್ಟಿರುವ ಪ್ರಸಾದ್ ತಂಟೆಪ್ಪಾಡಿ ಮತ್ತು ಪುರುಷೋತ್ತಮ ಪುಚ್ಚಪ್ಪಾಡಿ ಇವರನ್ನು ಗೌರವಿಸಲಾಯಿತು.
ಅಂತೆಯೇ ಕೃಷಿಯೇತರ ಸಾಲ ಪಾವತಿಗಾಗಿ ಪಾರ್ವತಿ ಹಾಗೂ ಧರ್ಮಪಾಲ ಅವರಿಗೆ ಬಹುಮಾನ ವಿತರಿಸಲಾಯಿತು.
ಕೊಕ್ಕೋ ಮಾರಾಟ ಮಾಡಿದ್ದಕ್ಕಾಗಿ ನೇಮಿರಾಜ್ ಪದೇಲ ಹಾಗೂ ಹೆಚ್ಚು ಖರೀದಿಗಾಗಿ ಶಿವರಾಮ್ ರೈ ಇವರಿಗೆ ಬಹುಮಾನ ವಿತರಿಸಲಾಯಿತು.
ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಗೀತಾ ರವರು “ಸಾಮಾಜಿಕ ಭದ್ರತಾ ಯೋಜನೆ”ಯ ಬಗ್ಗೆ ಮಾಹಿತಿ ನೀಡಿದರು.
ಸುಭಾಷಿಣಿ, ಲತಾ ಸರ್ವೇಶ್ ಹಾಗೂ ಭಾರತಿ ಪ್ರಾರ್ಥನೆ ನೆರವೇರಿಸಿದರು.
ಅಶೋಕ್ ಮೂಲೆಮಜಲು ಸಹಕಾರ ಗೀತೆ ಹಾಡಿದರು.
ವೆಂಕಟೇಶ್.ಹೆಚ್.ಎಲ್ ಸ್ವಾಗತಿಸಿ, ದುಗ್ಗಪ್ಪ ನಾಯ್ಕ ವಂದಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading