Ad Widget

“ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪಡೆದ ಶ್ರೀಮತಿ ಲಲಿತಾ ಕುಮಾರಿ ಅವರಿಗೆ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ

“ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪಡೆದ ಕೊಲ್ಲಮೊಗ್ರದ ಬೆಂಡೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತಾ ಕುಮಾರಿ ಅವರಿಗೆ ಇಂದು(ಸೆ.14) ಕೊಲ್ಲಮೊಗ್ರದ ಮಯೂರ ಕಲಾಮಂದಿರದಲ್ಲಿ ನಡೆದ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ, ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ನಿರ್ದೇಶಕರುಗಳಾದ ಡ್ಯಾನಿ ಯಳದಾಳು, ರೇಗನ್ ಶೆಟ್ಯಡ್ಕ, ಶೇಷಪ್ಪ ಗೌಡ ಕಿರಿಭಾಗ, ಹಿಮ್ಮತ್ ಕಿರಿಭಾಗ, ಕಮಲಾಕ್ಷ ಮುಳ್ಳುಬಾಗಿಲು, ಶ್ರೀಮತಿ ವೇದಾವತಿ ಮುಳ್ಳುಬಾಗಿಲು, ಶ್ರೀಮತಿ ಮೇನಕಾ ಕೊಪ್ಪಡ್ಕ, ಗೋಪಾಲಕೃಷ್ಣ ಚಾಂತಾಳ, ಮಹಾಲಿಂಗ ನಾಯ್ಕ ಶಿರೂರು, ಬೊಳಿಯ ಅಜಿಲ ಬೆಂಡೋಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬೆಳ್ಯಪ್ಪ ಗೌಡ ಮಣಿಯಾನ ಮನೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ತೀರ್ಥಕುಮಾರಿ.ವೈ, ಸಂಘದ ಸಿಬ್ಬಂದಿಗಳು ಹಾಗೂ ಸದಸ್ಯರುಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading