Ad Widget

ಬೆಳ್ಳಾರೆ : ರಿಕ್ಷಾದಲ್ಲಿ ಅಕ್ರಮವಾಗಿ ದನ ಸಾಗಾಟ – ಓರ್ವ ಆರೋಪಿ ಪೋಲೀಸರ ವಶಕ್ಕೆ , ಮತ್ತೋರ್ವ ಪರಾರಿ

Advertise : ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಸಂಪರ್ಕಿಸಿ – ವಿವಿಧ ಸಾಂಸ್ಕೃತಿಕ, ನೇಮೋತ್ಸವ, ಜಾತ್ರೋತ್ಸವ, ಕ್ರೀಡೋತ್ಸವ ಹಾಗೂ ಸಭೆ ಸಮಾರಂಭಗಳನ್ನು ನೇರ ಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ. ಮೊ: 9449387044, 99800 85616

. . . . . . . . .

ಪ್ರಯಾಣಿಕರ ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಬೆಳ್ಳಾರೆ ಪೋಲೀಸರು ದಾಳಿ ನಡೆಸಿ ರಿಕ್ಷಾ ಚಾಲಕನನ್ನು ಬಂಧಿಸಿದ ಘಟನೆ ನಡೆದಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿದ ಘಟನೆ ಸೆ. 09 ರಂದು ರಾತ್ರಿ ನಡೆದಿದೆ.

. . . . . . .

ಚೆನ್ನಾವರದ ಇಸುಬು ಎಂಬವರು ಕೊಳಂಬಳದ ವ್ಯಕ್ತಿಯೊಬ್ಬರಿಂದ ಹೋರಿಯೊಂದನ್ನು ಖರೀಸಿಸಿ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭ ಬೆಳ್ಳಾರೆ ಪೋಲೀಸರು ತಡೆದು ನಿಲ್ಲಿಸಿದಾಗ ಅಟೋರಿಕ್ಷಾ ( KA21 C 6532) ದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಹೋರಿ ಪತ್ತೆಯಾಗಿದೆ. ರಿಕ್ಷಾದಲ್ಲಿದ್ದ ಒರ್ವನನ್ನು ಪೋಲೀಸರು ವಶಕ್ಕೆ ಪಡೆದಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ.  ಹೋರಿಯನ್ನು ಮಾಂಸ ಮಾಡಲು ಸಾಗಿಸುತ್ತಿದ್ದೇನೆಂದು ಬಂಧಿತ ಆರೋಪಿ ಮಾಡಾವು ನಿವಾಸಿ ಅಬ್ದುಲ್ ಸಮದ್ ಒಪ್ಪಿಕೊಂಡಿದ್ದು , ಆತನಿಗೆ  ನ್ಯಾಯಾಲಯ. ನಾಯಾಂಗ ಬಂಧನ ವಿಧಿಸಿದೆ. ಇನ್ನೋರ್ವ ಆರೋಪಿ ಇಸುಬು ಚೆನ್ನಾವರ ಪರಾರಿಯಾಗಿದ್ದಾನೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading