Ad Widget

“ನ.ಪಂ. ಮಾಜಿ ಆಧ್ಯಕ್ಷ ವಿನಯ ಕಂದಡ್ಕರವರ ನಡೆ ಪಕ್ಷ ವಿರೋಧಿ ಚಟುವಟಿಕೆಯಲ್ಲವೇ?”  – ಸುಪ್ರೀತ್ ಮೋಂಟಡ್ಕ ಪ್ರಶ್ನೆ

“ಇತ್ತೀಚೆಗೆ ನಡೆದ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕಸದ ವಿಚಾರವಾಗಿ ಭಾರಿ ಚರ್ಚೆ ನಡೆದಿದ್ದು, ಈ ಬಗ್ಗೆ ನನ್ನ ಹೆಸರನ್ನು ಉಲ್ಲೇಖ ಮಾಡಿರುವ ಬಿ.ಜೆ.ಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮತ್ತು ನಗರ ಪಂಚಾಯತ್ ಮಾಜಿ ಅಧ್ಯಕ್ಷರು ವಿನಯ ಕಂದಡ್ಕ ರವರು ಇವತ್ತು ಪಕ್ಷದ ಉನ್ನತ ಹುದ್ದೆಯಲ್ಲಿ ಇದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದು ಕಾರ್ಯಕರ್ತರಿಗೆ ಮಾಡಿದ ಅನ್ಯಾಯವಲ್ಲದೇ ಗೊಂದಲ ಮಾಡಿರುತ್ತಾರೆ. ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಹಿಂದೆ ನಾನು ಸುಳ್ಯ ನಗರದಲ್ಲಿ ಕಸಗಳು ಟನ್ ಗಟ್ಟಲೆ ನಗರ ಪಂಚಾಯತ್ ಒಳಗಡೆ ಶೇಖರಣೆ ಮಾಡಿರುವುದನ್ನು ವಿರೋಧಿಸಿ ನಾನು ನರೇಂದ್ರ ಮೋದಿ ರವರ ಕಲ್ಪನೆ ಸ್ವಚ್ಚ ಭಾರತ್ ಯೋಜನೆಯಡಿಯಲ್ಲಿ ನಾನು ಮತ್ತು ಚಿತ್ರನಟ ಅನಿರುದ್ದ್ ಹೋರಾಟ ಮಾಡಿರುತ್ತೇವೆ. ಹೋರಾಟದ ಫಲ ಕಸ ಅಲ್ಲಿಂದ ಖಾಲಿಯಾಗಿರುತ್ತದೆ. ಆಗೀನ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಸುಬೋದ್ ಶೆಟ್ಟಿ ಮೇನಾಲ ಬಿ.ಜೆ.ಪಿ ಗೆ ಒಂದು ಶಿಸ್ತು ಇದೆ. ಅಶಿಸ್ತನ್ನು ಮೀರಿ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಾರೋ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಹೇಳಿಕೆ ನೀಡಿ ನನ್ನ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಜವಬ್ದಾರಿಯನ್ನು ತೆಗೆದಿರುತ್ತಾರೆ. ಅದರೇ ನಾನು ಈಗ ಬಿ.ಜೆ.ಪಿ ಸುಳ್ಯ ಮಂಡಲ ಅಧ್ಯಕ್ಷರಿಗೆ, ಜಿಲ್ಲಾ ಅಧ್ಯಕ್ಷರಿಗೆ ಪ್ರಶ್ನೆ ಮಾಡುತ್ತೇನೆ. ವಿನಯ ಕಂದಡ್ಕ ರವರ ಮೇಲೆ ಶಿಸ್ತು ಕ್ರಮ ಯಾಕೆ ಕೈಗೊಂಡಿರುವುದಿಲ್ಲ? ಪಕ್ಷದ ಶಿಸ್ತಿನ ಪ್ರಕಾರ ನಗರ ಪಂಚಾಯತ್ ಆಡಳಿತ ಮಂಡಳಿಗೆ ವಿರುದ್ಧವಾಗಿ ವರ್ತಿಸಿರುವುದು ಅಲ್ಲದೇ ಈ ಹಿಂದೆ ಎಸ್.ಡಿ.ಪಿ.ಐ ಸದಸ್ಯರಾಗಿ ಈಗ ಕಾಂಗ್ರೆಸ್ ಸದಸ್ಯ ಉಮ್ಮರ್ ರವರಿಗೆ ಸನ್ಮಾನ ಮಾಡಿರುವುದು ನಾಚಿಕೆ ಗೇಡು ಅಲ್ಲವೇ.‌ ಗುಪ್ತವಾಗಿ ಒಂದು ದಿನದ ಮುಂಚಿತವಾಗಿ ನಗರ ಪಂಚಾಯತ್‌ನ ಕೆಲವೊಂದು ಸದಸ್ಯರು ಸಭೆ ನಡೆಸಿರುವುದು ಪಕ್ಷಕ್ಕೆ ಹಾಗೂ ಅಧ್ಯಕ್ಷರಿಗೆ ಮಾಡಿದ ಅವಮಾನ ಅಲ್ಲವೇ? ಕಾರ್ಯಕರ್ತರಿಗೆ ಏನು ಸಂದೇಶ ಕೊಡುತ್ತಿದ್ದಾರೆ” ಎಂದು ಸುಪ್ರೀತ್ ಮೋಂಟಡ್ಕ ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading