Ad Widget

ಕೈ ಬರಹದ ಮೂಲಕ ಪವಿತ್ರ ಕುರ್ ಆನ್ ಬರೆದು ಸಾಧನೆ ಮಾಡಿದ ಯುವತಿಗೆ ಸುಳ್ಯದ ಮುಖಂಡರಿಂದ ಅಭಿನಂದನೆ ; “ಸಮರ್ಪಣೆ, ತಾಳ್ಮೆ ಮತ್ತು ತ್ಯಾಗ ಸಾದನೆಯ ರಹದಾರಿ” – ಕೆ.ಎಂ ಮುಸ್ತಫ

ಪುತ್ತೂರಿನ ಬೈತಡ್ಕ ಜುಮಾ ಮಸ್ಜಿದ್ ಮಾಜಿ ಅಧ್ಯಕ್ಷ ಹಾಜಿ ಬಿ.ಪಿ ಇಸ್ಮಾಯಿಲ್ ರವರ ಪುತ್ರಿ ಫಾತಿಮತ್ ಸಜ್ ಲಾ ತನ್ನ ಕಾಲೇಜು ವಿದ್ಯಾಭ್ಯಾಸದ ಜತೆಗೆ ಪವಿತ್ರ ಕುರಾನ್ ಅನ್ನು ಕೈ ಬರಹದ ಮೂಲಕ ಬರೆದು ಅಪೂರ್ವ ಸಾಧನೆ ಮಾಡಿರುತ್ತಾರೆ
ಇವರ ಸಾಧನೆಯನ್ನು ಗುರುತಿಸಿ ಸುಳ್ಯದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅವರ ಮನೆಗೆ ತೆರಳಿ ಸನ್ಮಾನಿಸಿದರು.‌
ಸನ್ಮಾನ ನೆರವೇರಿಸಿ ಮಾತನಾಡಿದ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ ಮುಸ್ತಫ “ಪೆನ್ನು ಬಳಸಿ ಪವಿತ್ರ ಕುರಾನನ್ನು ಕೈ ಬರಹ ಮೂಲಕ ಬರೆದವರು ಸಿಗಬಹುದು, ಆದರೆ ಹಿಂದಿನ ಕಾಲದಂತೆ ಲೇಖನಿ(ಕಲಮ್) ಯನ್ನು ಮಷಿ ಗೆ ಆದ್ದಿ ಪ್ರತಿಯೊಂದು ಅಕ್ಷರಗಳನ್ನು ಸಾಂಪ್ರದಾಯಿಕ ಮತ್ತು ಪಾವಿತ್ರ್ಯತೆಯ ಸೂಕ್ಷ್ಮ ದೃಷ್ಟಿ ಕೋನದಲ್ಲಿ ಬರೆದ ಫಾತಿಮತ್ ಸಜ್ ಲಾ ಸಾಧನೆ ಅತ್ಯಪೂರ್ವ” ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಬಿ ಇಬ್ರಾಹಿಂ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಸಜ್ಲಾ ರವರ ತಂದೆ ಹಾಜಿ ಬಿ.ಪಿ ಇಸ್ಮಾಯಿಲ್ ರವರು ಮಾಹಿತಿ ನೀಡಿ 2416 ಗಂಟೆ ಗಳಲ್ಲಿ ಲೆಕ್ಕ ಹಾಕಿದರೆ ಅಂದರೆ 306  ನಿರಂತರ ದಿನಗಳ ಬಳಕೆಯಾಗಿರುತ್ತದೆ, 14 ಇಂಚು ಅಗಲ, 12 ಇಂಚು ಉದ್ದ 5.5 ಇಂಚು ದಪ್ಪದ ಪುಸ್ತಕದಲ್ಲಿ ಸುಂದರವಾದ ವಿನ್ಯಾಸದ ಕಲಾತ್ಮಕ ಬೈಂಡಿಂಗ್ ನೊಂದಿಗೆ ಈ ಸಾಧನೆಯನ್ನು ಸುರಕ್ಷಿತ ವಾಗಿ ಇಡಲಾಗಿದೆ ಎಂದರು.

ವರದಿ : ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading