Ad Widget

ಕುಕ್ಕೆ ಸುಬ್ರಹ್ಮಣ್ಯ ದೇವಳದ ಸುತ್ತಮುತ್ತ ಅಭಿವೃದ್ಧಿಗೆ ತಾಂಬೂಲ ಪ್ರಶ್ನೆ ಚಿಂತನೆ

ಸುಬ್ರಹ್ಮಣ್ಯ:
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿ ಹಾಗೂ ಕಾಶಿಕಟ್ಟೆ ಗಣಪತಿ ಗುಡಿಯ ಸುತ್ತಮುತ್ತ ಅಭಿವೃದ್ಧಿಪಡಿಸುವ ಉದ್ದೇಶದಿಂದ ತಾಂಬೂಲ ಪ್ರಶ್ನೆ ಚಿಂತನೆಯು ಸೆಪ್ಟೆಂಬರ್ 2ರಂದು ಮಂಗಳವಾರ, ಪೂರ್ವಾಹ್ನ 10.30ಕ್ಕೆ ದೇವಳ ಆಡಳಿತ ಕಛೇರಿಯ 2ನೇ ಮಹಡಿಯಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ. ಕುಮಾರ ಗುರು ತಂತ್ರಿ ಹಾಗೂ ಶಶಿ ಪಂಡಿತ್ ತಾಂಬೂಲ ಜೋತಿಷ್ಯ ಪ್ರಶ್ನೆಯನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ನೇತೃತ್ವವಹಿಸಿದ್ದರು.
ಸಮಿತಿಯ ಸದಸ್ಯರಾದ ಅಶೋಕ್ ನೆಕ್ರಾಜೆ, ಅಜಿತ್ ಪಾಲೇರಿ, ಡಾ.ರಘು, ಮಹೇಶ್ ಕುಮಾರ್ ಕರಿಕ್ಕಳ, ಶ್ರೀಮತಿ ಸೌಮ್ಯ ಭರತ್, ಪ್ರವೀಣ್ ರೈ, ಶ್ರೀಮತಿ ಲೀಲಾ ಮನೋಹರ್ ಉಪಸ್ಥಿತರಿದ್ದರು.
ಹಾಗೆಯೇ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಲೋಕೋಪಯೋಗಿ ಇಂಜಿನಿಯರ್ ಪ್ರಮೋದ್ ಮತ್ತು ಉದಯಕುಮಾರ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ರವೀಂದ್ರ ಶೆಟ್ಟಿ, ಶಿವರಾಮ ರೈ, ಮಾಜಿ ದೇವಸ್ಥಾನ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್ ಮತ್ತು ಮಾಧವ, ದೇವಸ್ಥಾನದ ಅಧಿಕಾರಿಗಳು ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading