Ad Widget

ಸುಳ್ಯ ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟ : ಕೆ.ಪಿ.ಎಸ್ ಬೆಳ್ಳಾರೆಯ ನಾಲ್ಕು ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಇಲಾಖೆ ಸುಳ್ಯ ಮತ್ತು ಕೆಪಿಎಸ್ ಬೆಳ್ಳಾರೆ ಇದರ ಜಂಟಿ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ 14 ಮತ್ತು 17 ವರ್ಷದ ವಯೋಮಾನದ ಬಾಲಕ ಬಾಲಕಿಯರ  ಹ್ಯಾಂಡ್ ಬಾಲ್ ಪಂದ್ಯಾಟವು ಕೆಪಿಎಸ್ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಮಿತಾ.ಎಲ್ ರೈ ಉದ್ಘಾಟಿಸಿದರು.
ಕೆ.ಪಿ.ಎಸ್ ಬೆಳ್ಳಾರೆಯ ಎಸ್‌.ಡಿ.ಎಂ.ಸಿ ಕಾರ್ಯಾಧ್ಯಕ್ಷರಾದ ಜೆ.ಹರ್ಷ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು, ರೋಟರಿಯ ಮಾಜಿ  ಅಧ್ಯಕ್ಷರಾದರ ಚಂದ್ರಶೇಖರ್ ರೈ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಪ್ರಾಂಶುಪಾಲರಾದ ಜನಾರ್ಧನ‌ ಕೆ ಎನ್, ಎಸ್.ಡಿ.ಎಂ.ಸಿಯ ನಿಕಟ ಪೂರ್ವ ಕಾರ್ಯಧ್ಯಕ್ಷರಾದ ಶ್ರೀನಾಥ ರೈ ವಿವರಗಳು ಭಾಗವಹಿಸಿದ್ದರು.
ತಾಲೂಕಿನ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಂದ 15 ರಷ್ಟು ತಂಡಗಳು ಭಾಗವಹಿಸಿದ್ದು 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಕೆ.ಪಿ.ಎಸ್ ಬೆಳ್ಳಾರೆ ಪ್ರೌಢ ವಿಭಾಗ ಪ್ರಥಮ ಸ್ಥಾನವನ್ನು ಮತ್ತು ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕೆ.ಪಿ.ಎಸ್ ಬೆಳ್ಳಾರೆ ಪ್ರೌಢ ವಿಭಾಗ ಪ್ರಥಮ ಸ್ಥಾನವನ್ನು ಮತ್ತು ರೋಟರಿ ವಿದ್ಯಾ ಸಂಸ್ಥೆ ಸುಳ್ಯ ಇವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಕೆ.ಪಿ.ಎಸ್ ಬೆಳ್ಳಾರೆ ಪ್ರಾಥಮಿಕ ವಿಭಾಗ ಪ್ರಥಮ ಸ್ಥಾನವನ್ನು ಮತ್ತು ಕೆ.ಪಿ.ಎಸ್ ಬೆಳ್ಳಾರೆ ಪ್ರೌಢ ವಿಭಾಗ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕೆ.ಪಿ.ಎಸ್ ಬೆಳ್ಳಾರೆ ಪ್ರಾಥಮಿಕ ವಿಭಾಗ ಪ್ರಥಮ ಸ್ಥಾನವನ್ನು ಮತ್ತು ಕೆ.ಪಿ.ಎಸ್ ಬೆಳ್ಳಾರೆ ಪ್ರೌಢ ವಿಭಾಗ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಪ್ರಥಮ ಸ್ಥಾನವನ್ನು ಗಳಿಸಿದ ಕೆ.ಪಿ.ಎಸ್ ಬೆಳ್ಳಾರೆಯ ನಾಲ್ಕು ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತವೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಕೆ.ಪಿ.ಎಸ್ ಬೆಳ್ಳಾರೆಯ ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಮುಖ್ಯ ಗುರುಗಳು, ಎಸ್.ಡಿ.ಎಂ.ಸಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ಅಭಿನಂದಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading