Ad Widget

ಆ.27 ರಿಂದ 29 ರವರೆಗೆ  ಹಳೇಗೇಟು ಗಣೇಶೋತ್ಸವ – ಆ.29 ರಂದು ಭವ್ಯ ಶೋಭಾಯಾತ್ರೆ

ಸಾಂಸ್ಕೃತಿಕ ಸಂಘ ಹಳಗೇಟು, ಸುಳ್ಯ ಇದರ ಆಶ್ರಯದಲ್ಲಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮವು ಸಾಂಸ್ಕೃತಿಕ ಸಂಘ ಹಳೆಗೇಟು ಇದರ ವಸಂತಕಟ್ಟೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಅಗಸ್ಟ್ 27ರಂದು ಬೆಳಿಗ್ಗೆ 7:00 ಗಂಟೆಗೆ ಸ್ಥಳ ಶುದ್ದಿ, ಗಣಪತಿ ಹೋಮ, ವಿಗ್ರಹ ಪ್ರತಿಷ್ಠಾಪನೆ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಸಂಜೆ ಗಂಟೆ 6:00 ರಿಂದ ದೀಪಾಂಜಲಿ ಮಹಿಳಾ ಭಜನಾ ಮಂಡಳಿ  ಶಾಂತಿನಗರ ಇವರಿಂದ ಭಜನೆ, ರಾತ್ರಿ ಗಂಟೆ 7:00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ನ ಸುರೇಶ್ ಭಟ್ ನೆರವೇರಿಸಲಿದ್ದಾರೆ. ಸಂಜೆ ಗಂಟೆ 7:15 ರಿಂದ ವಸಂತ ಕಾಯರ್ತೋಡಿ ಸಾರಥ್ಯದ ಪ್ಯೂಶನ್ ಡಾನ್ಸ್ ತಂಡದ ಚಿಣ್ಣರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9:30 ಕ್ಕೆ ಮಹಾಪೂಜೆ ನಡೆಯಲಿದೆ.
ಆಗಸ್ಟ್ 28 ರಂದು ಬೆಳಿಗ್ಗೆ 8:00 ಗಂಟೆಗೆ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ 6:00 ರಿಂದ ಜಯನಗರ ಗಜಾನನ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 7:00 ರಿಂದ ಮಿಲೇನಿಯಂ ಆರ್ಕೆಸ್ಟ್ರಾ ತಲಚೇರಿ ಕೇರಳ ಇವರಿಂದ ಭಕ್ತಿ ಹಾಗೂ ಚಿತ್ರಗೀತೆಗಳ ಸಂಗಮ ನೆರವೇರಲಿದೆ. ರಾತ್ರಿ ಗಂಟೆ 10:00ಕ್ಕೆ ಮಹಾಪೂಜೆ ನಡೆಯಲಿದೆ.
ಆ.29 ರಂದು ಬೆಳಿಗ್ಗೆ ಗಂಟೆ 8:00ಕ್ಕೆ ಪೂಜೆ, ಮಧ್ಯಾಹ್ನ ಮಹಾಪೂಜೆ, ನಂತರ ಸಾರ್ವಜನಿಕ ಅನ್ನಪ್ರಸಾದ ಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 5:00 ರಿಂದ ವೈಭವದ ಶೋಭಯಾತ್ರೆಯೂ ಹಳೆಗೇಟಿನಿಂದ ಹೊರಟು,  ಶ್ರೀರಾಮ್ ಪೇಟೆ, ಶ್ರೀ ಚೆನ್ನಕೇಶವ ದೇವಸ್ಥಾನ, ವಿವೇಕಾನಂದ ಸರ್ಕಲ್ ಜೆ.ಸಿ ರಸ್ತೆ, ವಾಪಸ್ಸು ಮಿಲಿಟರಿ ಗ್ರೌಂಡ್ ನಂತರ ಬ್ರಹ್ಮರಗಯದ ಬಳಿ ಜಲಸ್ತಂಭನಗೊಳ್ಳಲಿದೆ ಎಂದು ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading