Ad Widget

ಕಾಫಿ ಕೃಷಿ ಉತ್ತೇಜಿಸಲು ಸಂಸದ ಬ್ರಿಜೇಶ್ ಚೌಟ ರ ನೇತೃತ್ವದಲ್ಲಿ ಒಂದು ವಿನೂತನ ಪ್ರಯತ್ನ – ಇಂದು (ಆ.25) ಕಾಪಿಕೊ (Kaapico) ಉದ್ಘಾಟನೆ ಮತ್ತು ಕಾರ್ಯಾಗಾರಕ್ಕೆ ಚಾಲನೆ – ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ವೆಂಕಟ್ ವಳಲಂಬೆ ಮನವಿ

ದಕ್ಷಿಣ ಕನ್ನಡದಲ್ಲಿ ಕಾಫಿ ಕೃಷಿ ಉತ್ತೇಜಿಸಲು ಸಂಸದ ಬ್ರಿಜೇಶ್ ಚೌಟ ರ ನೇತೃತ್ವದಲ್ಲಿ ಒಂದು ವಿನೂತನ ಪ್ರಯತ್ನ ಮಾಡಲಾಗಿದ್ದು ಇದರ ಅಂಗವಾಗಿ ಇಂದು ( ಆ.25) ಬೆಳಿಗ್ಗೆ 10 ಗಂಟೆಗೆ ಕಾಪಿಕೊ (Kaapico) ಉದ್ಘಾಟನೆ ಮತ್ತು ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ

. . . . . . . . .

ಈ ಸಂದರ್ಭದಲ್ಲಿ ಶಾಸಕಿ ಕು ಭಾಗೀರಥಿ ಮುರುಳ್ಯ, ಕಾಫಿ ಬೋರ್ಡ್ ಚಯರ್ ಮ್ಯಾನ್ ದಿನೇಶ್ ಎಂ. ಜೆ., ನಬಾರ್ಡ್ ಡಿಡಿ ಎಂ ಶ್ರೀಮತಿ ಸಂಗೀತ ಕರ್ತ, ಮಂಗಳೂರು ತೋಟಗಾರಿಕಾ ಇಲಾಖೆಯ ಡಿಡಿ ಮಂಜುನಾಥ್ , ಮಡಿಕೇರಿ ಕಾಫಿ ಬೋರ್ಡ್ ಡಿಡಿ
ಡಾ. ವಿ ಚಂದ್ರಶೇಖರ್ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಡಾ.ಧರ್ಮರಾಜ್ ಸಕಲೇಶಪುರ ಆಗಮಿಸಲಿದ್ದಾರೆ.

. . . . . . .

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಯನ್ನು ಅವಲಂಬಿಸಿರುವವರು ಹೆಚ್ಚಾಗಿದ್ದಾರೆ. ಆದರೆ ಅಡಿಕೆ ಬೆಳೆಗೆ ಹಳದಿ ರೋಗ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕಾಫಿ ಬೆಳೆಗೆ ಉತ್ತೇಜನ ನೀಡಲು ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸುಳ್ಯದ ಕೃಷಿಕರು ಸಂಸದ ಕ್ಯಾ.ಬ್ರಿಜೇಶ್ ಚೌಟ ಗಮನಕ್ಕೆ ತಂದಿದ್ದರು.

ಈ ಬಗ್ಗೆ ವಿಶೇಷ ಗಮನ ಹರಿಸಿ ಸಂಸದರು ಪರ್ಯಾಯ ಬೆಳೆ ಬೆಳೆಸುವ ಕ್ರಮದ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಆದ್ದರಿಂದ ರೈತರಿಗೆ ಬೆಳಕು ನೀಡುವ ಉದ್ದೇಶಕ್ಕಾಗಿ ಆ‌ 25 ಬೆಳಿಗ್ಗೆ 10 ಗಂಟೆಗೆ ಸುಳ್ಯದ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಕಾಫಿಕೋ ಉದ್ಘಾಟನೆ ಮತ್ತು ಕಾರ್ಯಗಾರಕ್ಕೆ ಚಾಲನೆ ಸಿಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading