Ad Widget

ಶ್ರೀಮತಿ ಸರೋಜಿನಿ ಗಂಗಯ್ಯ ಗೌಡ ಮುಳುಗಾಡು ನಿಧನ

ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ‌.ಗಂಗಯ್ಯ ಗೌಡ ಮುಳುಗಾಡು ಅವರ ಧರ್ಮಪತ್ನಿ ಶ್ರೀಮತಿ ಸರೋಜಿನಿ ಗಂಗಯ್ಯ ಗೌಡ ಮುಳುಗಾಡು ಅಸೌಖ್ಯದಿಂದ ಆ.22 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಬ್ಯಾಂಕ್ ಉದ್ಯೋಗಿ‌ರುವ ಇವರು ಶಂಖಶ್ರೀ ಮಹಿಳಾ ಮಂಡಲದ ಸ್ಥಾಪಕಾದ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

. . . . . . . . .

ಮೃತರು ಪುತ್ರ ಗುತ್ತಿಗಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಯುವ ಮುಂದಾಳು ಸನತ್ ಮುಳುಗಾಡು, ಸೊಸೆ ಚಂಚಲಾ, ಪುತ್ರಿಯರಾದ ನವ್ಯ, ದಿವ್ಯಾ ಹಾಗೂ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

. . . . . . .

ಅಪರಾಹ್ನ 2 ಗಂಟೆಗೆ ಮಂಗಳೂರಿನಿಂದ ಪಾರ್ಥಿವ ಶರೀರ ವಳಲಂಬೆ ಮುಳುಗಾಡು ಮನೆಗೆ ಆಗಮಿಸಲಿದೆ ಎಂದು ತಿಳಿದುಬಂದಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading