Ad Widget

ನಡುಗಲ್ಲು : ಜವಾಹರ್ ಯುವಕ ಮಂಡಲದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಜವಾಹರ್ ಯುವಕ ಮಂಡಲ(ರಿ.) ನಡುಗಲ್ಲು ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ಆ.17 ಭಾನುವಾರದಂದು ನಡುಗಲ್ಲು ವಠಾರದಲ್ಲಿ ನಡೆಯಿತು.
ಆಟೋಟ ಸ್ಪರ್ಧೆಗಳನ್ನು ಯುವಕ ಯುವತಿ ಮಂಡಲದ ವಠಾರದಲ್ಲಿ ಶ್ರೀ ಮಹಾ ಮೃತ್ಯುಂಜಯೇಶ್ವರ ಮತ್ತು ಶ್ರೀ ಪಾರ್ವತಿ ಸೇವಾ ಟ್ರಸ್ಟ್(ರಿ.) ನಡುಗಲ್ಲು ಇದರ ಅಧ್ಯಕ್ಷರಾದ ರಾಮಚಂದ್ರ ಭಟ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಅಂಗನವಾಡಿ ಮಕ್ಕಳಿಂದ ಹಿಡಿದು ಪುರುಷರ ಹಾಗೂ ಮಹಿಳೆಯರ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜವಾಹರ್ ಯುವಕ ಮಂಡಲದ ಅಧ್ಯಕ್ಷರಾದ ಕುಶನ್ ಉತ್ರಂಬೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಿರ್ಮಲಾ ಪದ್ಮನಾಭ ಪರಮಲೆ, ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗ ರಿಟ್ವಾಲ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ನಿರ್ದೇಶಕರಾದ ದಿನೇಶ್ ಆತ್ಯಾಡಿ, ಜವಾಹರ್ ಯುವಕ ಮಂಡಲದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಬಾಳುಗೋಡು, ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಕುಮಾರ್ ಚಾರ್ಮತ, ಹರೀಶ್ ಕೊಯ್ಲ, ಶ್ರೀಮತಿ ಲೀಲಾವತಿ ಹರೀಶ್ ಅಂಜೇರಿ, ಶ್ರೀಮತಿ ಪ್ರಮೀಳಾ ಭಾಸ್ಕರ ಎರ್ಧಡ್ಕ, ಯುವತಿ ಮಂಡಲದ ಅಧ್ಯಕ್ಷರಾದ ಶ್ರೀಮತಿ ಉಮೇಶ್ವರಿ ನೆಲ್ಲಿಪುಣಿ, ಜವಾಹರ್ ಯುವಕ ಮಂಡಲದ ಕಾರ್ಯದರ್ಶಿ ಯನಿತ್ ಕುಮಾರ್ ಪಡ್ರೆ, ಉಪಾಧ್ಯಕ್ಷರಾದ ಜೀವನ್ ಎರ್ಧಡ್ಕ, ಗೌರವಾಧ್ಯಕ್ಷರಾದ ಪ್ರಶಾಂತ್ ಅಂಬೆಕಲ್ಲು, ಕ್ರೀಡಾ ತರಬೇತುದಾರರಾದ ಕಿಶೋರ್ ಅಂಬೆಕಲ್ಲು ಹಾಗೂ ಶಿವಪ್ರಸಾದ್ ಮರಕತ ಉಪಸ್ಥಿತರಿದ್ದರು.
ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಯುವಕ ಹಾಗೂ ಯುವತಿ ಮಂಡಲದ ಪದಾಧಿಕಾರಿಗಳು ಅತಿಥಿಗಳಿಗೆ ಸ್ಮರಣಿಕೆ ನೀಡಿದರು.
ಹರೀಶ್ ಅಂಜೇರಿ ಸ್ವಾಗತಿಸಿ, ಕೇಶಿರಾಜ್ ಹೊಸೋಳಿಕೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading